Tuesday, September 29, 2026

BDA Apartments

ನಮ್ಮಲ್ಲಿ ಯಾರೇ ಸಿಎಂ ಆದ್ರೂ ಖುಷಿ ಪಡ್ತೇನೆ- ಸಿಎಂ ಸಿದ್ದರಾಮಯ್ಯ BDA JK_Adv BDA Adv
Home Front Page ನಮ್ಮಲ್ಲಿ ಯಾರೇ ಸಿಎಂ ಆದ್ರೂ ಖುಷಿ ಪಡ್ತೇನೆ- ಸಿಎಂ ಸಿದ್ದರಾಮಯ್ಯ

ನಮ್ಮಲ್ಲಿ ಯಾರೇ ಸಿಎಂ ಆದ್ರೂ ಖುಷಿ ಪಡ್ತೇನೆ- ಸಿಎಂ ಸಿದ್ದರಾಮಯ್ಯ

ಬೆಂಗಳೂರು,ಮಾರ್ಚ್,25,2026 (www.justkannada.in):  ವಿಧಾನಸಭೆಯಲ್ಲಿ ಬಜೆಟ್ ಮೇಲಿನ ಚರ್ಚೆಗೆ ಉತ್ತರ ನೀಡುವ ವೇಳೆ ಡಿಕೆ ಶಿವಕುಮಾರ್ ಮುಖ್ಯಮಂತ್ರಿಯಾದರೆ ಖುಷಿಯಾಗುತ್ತದೆ ಎಂದು  ಛೇಡಿಸಿದ ಬಿಜೆಪಿಯ ಶಾಸಕ ಸುನೀಲ್‌ಕುಮಾರ್‌ ಗೆ  ಟಾಂಗ್ ಕೊಟ್ಟ ಸಿಎಂ ಸಿದ್ದರಾಮಯ್ಯ 224 ಶಾಸಕರೂ ಸಿಎಂ ಆಗಲು ಅರ್ಹರು, ನಮ್ಮಲ್ಲಿ ಯಾರೇ ಸಿಎಂ ಆದರೂ ಖುಷಿ ಪಡುತ್ತೇನೆ ಎಂದರು.

ವಿಧಾನಸಭೆಯಲ್ಲಿ  ಬಜೆಟ್ ಮೇಲಿನ ಚರ್ಚೆಗೆ ಉತ್ತರ ನೀಡುತ್ತಿದ್ದ ಸಿಎಂ ಸಿದ್ದರಾಮಯ್ಯ ಅವರನ್ನು ಬಿಜೆಪಿ ಶಾಸಕ ಸುನೀಲ್‌ಕುಮಾರ್‌ ಅವರು ಮಧ್ಯಪ್ರವೇಶಿಸಿ ಡಿ.ಕೆ.ಶಿವಕುಮಾರ್‌ ಅವರು ಮುಖ್ಯಮಂತ್ರಿಯಾದರೂ ಖುಷಿಯಾಗುತ್ತದೆ ಎಂದು ಹೇಳಲಿಲ್ಲ ಎಂದು ಕಾಲೆಳೆದರು.

ಆಗ  ಸಿಎಂ ಸಿದ್ದರಾಮಯ್ಯ, ನಮ್ಮ ಪಕ್ಷದ ಹೈಕಮಾಂಡ್‌ ಹೇಳುವವರೆಗೂ ನಾನೇ ಮುಖ್ಯಮಂತ್ರಿ. ನಮಲ್ಲಿ ಯಾರೇ ಮುಖ್ಯಮಂತ್ರಿಯಾದರೂ ಖುಷಿಯಾಗುತ್ತದೆ. 224 ಶಾಸಕರು ಮುಖ್ಯಮಂತ್ರಿಯಾಗಲು ಅರ್ಹರು. ಯಾರೇ ಮುಖ್ಯಮಂತ್ರಿಯಾದರೂ ಖುಷಿ ಪಡುತ್ತೇನೆ ಎಂದರು.

ಸಚಿವರಾದ ಎಂ.ಬಿ.ಪಾಟೀಲ್‌, ಕೆ.ಎಚ್‌.ಮುನಿಯಪ್ಪ, ದಿನೇಶ್‌ಗುಂಡೂರಾವ್‌, ಶಾಸಕ ಕೋನರೆಡ್ಡಿ ಸೇರಿದಂತೆ ಕೆಲವು ಹೆಸರನ್ನು ಮಾತ್ರ ಉಲ್ಲೇಖಿಸಿ ಅವರೂ ಮುಖ್ಯಮಂತ್ರಿಯಾಗಬಾರದೇ ಎಂದು ಪ್ರಶ್ನಿಸಿದರು.ಅವರೆಲ್ಲರಿಗೂ ಯೋಗ್ಯತೆ ಇದೆ, ಅವಕಾಶ ಸಿಗಲ್ಲ ಅಷ್ಟೇ ಎಂದರು.

Key words: Session, DK Shivakumar, becomes CM, CM, Siddaramaiah