Thursday, August 20, 2026

BDA Apartments

Home Front Page ಮೈಸೂರು ಗಡಿಯಲ್ಲಿ ಹೊರ ರಾಜ್ಯದ ಪ್ರಯಾಣಿಕರ ಬಿಗಿ ತಪಾಸಣೆ

ಮೈಸೂರು ಗಡಿಯಲ್ಲಿ ಹೊರ ರಾಜ್ಯದ ಪ್ರಯಾಣಿಕರ ಬಿಗಿ ತಪಾಸಣೆ

ಮೈಸೂರು, ಜುಲೈ 05, 2020 (www.justkannada.in): ಸಂಡೇ ಕರ್ಫ್ಯೂ ಲಾಕ್ ಡೌನ್ ಹಿನ್ನೆಲೆಯಲ್ಲಿ ಇಂದು ಕೂಡ ಪೊಲೀಸರಿಂದ ಹೆಚ್ಚಿನ ತಪಾಸಣೆ ನಡೆಸಲಾಗುತ್ತಿದೆ.

ಚೆಕ್ ಪೋಸ್ಟ್ ನಲ್ಲಿ ಪೊಲೀಸರ ಕಟ್ಟುನಿಟ್ಟಿನ ತಪಾಸಣೆ ನಡೆಸಲಾಗುತ್ತಿದೆ. ನಗರ ಪ್ರವೇಶಕ್ಕೂ ಮುನ್ನವೇ ಹೊರ ರಾಜ್ಯ ಪ್ರಯಾಣಿಕರ ತಪಾಸಣೆ ಮಾಡಲಾಗುತ್ತಿದೆ.

ಹೊರ ರಾಜ್ಯದಿಂದ ಬರುವ ವಾಹನಗಳನ್ನು ತಪಾಸಣೆ ಮಾಡಿ ಬಿಡುತ್ತಿರುವ ಪೊಲೀಸರು. ಹೊರರಾಜ್ಯದವರಿಗೆ ಪ್ರತ್ಯೇಕ ಪೊಲೀಸ್ ಚೆಕ್ ಪೋಸ್ಟ್ ನಿರ್ಮಾಣ ಮಾಡಲಾಗಿದೆ.

ಕಳಸ್ತವಾಡಿ ಬಳಿ ಇರುವ ಪೊಲೀಸ್ ಚೆಕ್ ಪೋಸ್ಟ್ ಪಾಸ್ ಮೂಲಕ ರಾಜ್ಯಕ್ಕೆ ಪ್ರವೇಶಿಸುವ ಹೊರ ರಾಜ್ಯದವರಿಗೆ ಥರ್ಮಲ್ ಸ್ಕ್ರೀನಿಂಗ್ ನಡೆಸಿ ತಪಾಸಣೆ ನಡೆಸಲಾಗುತ್ತಿದೆ.

ಕೇರಳದಿಂದ ಮೈಸೂರಿಗೆ ಹೆಚ್ಚಿನ ಜನರು ಆಗಮಿಸುವ ಹಿನ್ನೆಲೆಯಲ್ಲಿ ಮೈಸೂರಿನಲ್ಲಿ ಉಳಿಯುವ ಹೊರರಾಜ್ಯದಿಂದ ಬಂದವರ ಕೈಗೆ ಮುದ್ರೆ ಹಾಕಿ ಹೋಂ ಕ್ವಾರಂಟೈನ್ ಗೆ ಸೂಚನೆ ನೀಡಲಾಗುತ್ತಿದೆ.