ಭಾರತದಲ್ಲಿ ಕೊರೊನಾ ಆರ್ಭಟ: ಒಂದೇ ದಿನ 613 ಜನರ ಸಾವು

ನವದೆಹಲಿ, ಜುಲೈ 05, 2020 (www.justkannada.in): ಭಾರತದಲ್ಲಿ ಮತ್ತೊಮ್ಮೆ ಕೋವಿಡ್ -19 ಆರ್ಭಟಿಸಿದ್ದು ಕಳೆದ 24 ಗಂಟೆಗಳ ಅವಧಿಯಲ್ಲಿ 24,850 ಜನರಿಗೆ ಸೋಂಕು ತಗುಲಿದೆ.

ಮಾತ್ರವಲ್ಲದೆ ಒಂದೇ ದಿನ 613 ಜನರು ಮೃತಪಟ್ಟಿದ್ದಾರೆ. ಹಾಗಾಗಿ ಒಟ್ಟಾರೆ ವೈರಾಣು ಪೀಡಿತರ ಸಂಖ್ಯೆ 6,73,165 ಕ್ಕೆ ತಲುಪಿದೆ.

ದೇಶದಲ್ಲಿ ಕೋವಿಡ್ ಕಾರಣದಿಂದ ಸಾವನ್ನಪ್ಪಿದ್ದವರ ಸಂಖ್ಯೆ 19,268ಕ್ಕೆ ಏರಿಕೆಯಾಗಿದೆ. ಮಾತ್ರವಲ್ಲದೆ 2,44,481 ಸಕ್ರೀಯ ಪ್ರಕರಣಗಳು ವರದಿಯಾಗಿವೆ ಎಂದು ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.

ಒಟ್ಟಾರೆ ಸೊಂಕು ಪೀಡಿತರಲ್ಲಿ 4,09,082 ಜನರು ಗುಣಮುಖರಾಗಿದ್ದು, ಕಳೆದ ಒಂದು ದಿನದಲ್ಲಿ 14,856 ಮಂದಿ ಆಸ್ಪತ್ರೆಯಿಂದ ಡಿಸ್ ಚಾರ್ಜ್ ಆಗಿದ್ದಾರೆ.