Wednesday, August 26, 2026

BDA Apartments

Home Crime  ಕೆಜಿಎಫ್ ಗಣಿಯಲ್ಲಿ ಕಳ್ಳತನಕ್ಕೆ ಹೋಗಿ ಉಸಿರುಗಟ್ಟಿ ಮೂವರು ಕಳ‍್ಳರ ಸಾವು

 ಕೆಜಿಎಫ್ ಗಣಿಯಲ್ಲಿ ಕಳ್ಳತನಕ್ಕೆ ಹೋಗಿ ಉಸಿರುಗಟ್ಟಿ ಮೂವರು ಕಳ‍್ಳರ ಸಾವು

ಕೋಲಾರ, ಮೇ 14, 2020 (www.justkannada.in): ಕೋಲಾರ ಜಿಲ್ಲೆಯ ಕೆಜಿಎಫ್ ಮಾರಿಕುಪ್ಪಂ ಬಳಿ ಇರುವ ಚಿನ್ನದ ಗಣಿಯಲ್ಲಿ ಘಟನೆ ಕಳ್ಳತನಕ್ಕೆ ಇಳಿದಿದ್ದ ಮೂವರು ಮೃತಪಟ್ಟಿದ್ದಾರೆ.

ಚಿನ್ನದ‌ ಗಣಿ ಗುಂಡಿಯಲ್ಲಿದ್ದ ಕಬ್ಬಿಣ ಕಳ್ಳತನಕ್ಕಿಳಿದಾಗ ಜಾರಿ ಬಿದ್ದು ಸಾವನ್ನಪ್ಪಿರುವ ಮೂವರು. ಕಳ್ಳತನಕ್ಕೆಂದು ತೆರಳಿದ್ದ ಐವರ ಪೈಕಿ ಮೂವರ ಸಾವು, ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.

ಸ್ಥಳದಲ್ಲಿ ಕೆಜಿಎಫ್ ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿ ಯಿಂದ ಮುಂದುವರೆದ ಕಾರ್ಯಾಚರಣೆ. ಸುಮಾರು ನೂರಾರು ಅಡಿ ಆಳವಿರುವ ಚಿನ್ನದ ಗಣಿ ಗುಂಡಿಯಲ್ಲಿ ಹುಸಿರುಗಟ್ಟಿ ಮೂವರು ಸಾವನ್ನಪ್ಪಿದ್ದಾರೆ. ಮತ್ತೋರ್ವನ ಶವಕ್ಕಾಗಿ ಅಗ್ನಿಶಾಮಕ ಸಿಬ್ಬಂದಿಯಿಂದ ಮುಂದುಬರೆದ ತೀವ್ರ ಶೋದ ಕಾರ್ಯ ನಡೆದಿದೆ. ಸತತ ೮ ಗಂಟೆಗಳ ಕಾರ್ಯಾಚರಣೆಯಲ್ಲಿ ೨ ಶವಗಳನ್ನ ಹೊರ ತೆಗೆದ ಅಗ್ನಿಶಾಮಕ ದಳ ಸಿಬ್ಬಂದಿ.