Thursday, August 27, 2026

BDA Apartments

Home Front Page ಮಂಡ್ಯ ಜಿಲ್ಲೆಯಲ್ಲಿ ಯುವಕನ ಕಿರುಕುಳ ಬೇಸತ್ತು ಯುವತಿ‌ ಆತ್ಮಹತ್ಯೆ 

ಮಂಡ್ಯ ಜಿಲ್ಲೆಯಲ್ಲಿ ಯುವಕನ ಕಿರುಕುಳ ಬೇಸತ್ತು ಯುವತಿ‌ ಆತ್ಮಹತ್ಯೆ 

ಮಂಡ್ಯ , ಮೇ 14, 2020 (www.justkannada.in): ಯುವಕನ ಕಿರುಕುಳ ಬೇಸತ್ತು ಯುವತಿ‌ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಂಡ್ಯ ತಾಲೂಕಿನ ಸುಂಡಹಳ್ಳಿ ಗ್ರಾಮದಲ್ಲಿ ನಡೆದಿದೆ.

ಸುಂಡಹಳ್ಳಿ ಗ್ರಾಮದ ರಮ್ಯ(೨೨)ಮೃತ ದುರ್ದೈವಿ. ಅದೇ ಗ್ರಾಮದ ಶಿವರಾಜ್ ಎಂಬ ಯುವಕನಿಂದ ಪ್ರೀತಿ ಹೆಸರಲ್ಲಿ ಕಿರುಕುಳ ನೀಡುತ್ತಿದ್ದ ಎನ್ನಲಾಗಿದೆ.

ನೆನ್ನೆ ರಾತ್ರಿ ಮನೆಯ ಬಳಿ ಬಂದು ಪ್ರೀತಿಸುವಂತೆ ಜಗಳ ಮಾಡಿ ಕಿರುಕುಳ. ಇದ್ರಿಂದ ಮನನೊಂದು ಮನೆಯಲ್ಲಿ ನೇಣಿಗೆ ಶರಣಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಸಾಯುವ ಮುನ್ನ ಡೆತ್ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಶರಣಾಗಿದ್ದಾಳೆ. ಈ ಸಂಬಂಧ ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.