ತಿ.ನರಸೀಪುರ ಪಟ್ಟಣದ ಹಾಸ್ಟೆಲ್ ನಲ್ಲಿ ಕ್ವಾರಂಟೈನ್ ಗೆ ಸ್ಥಳೀಯರ ವಿರೋಧ

ಮೈಸೂರು, ಮೇ 14, 2020 (www.justkannada.in): , ಹೊರ ರಾಜ್ಯದಿಂದ ಆಗಮಿಸಿದ್ದವರ ಕ್ವಾರಂಟೈನ್ ಗೆ ಸ್ಥಳೀಯರ ವಿರೋಧ. ತಿ.ನರಸೀಪುರ ತಾಲೂಕಿನ ನಾಲ್ವರು ಹೊರ ರಾಜ್ಯದಿಂದ ಆಗಮಿಸಿದ್ದರು.

ಫೆಸಿಲಿಟಿ ಕ್ವಾರಂಟೈನ್ ಮಾಡಿರುವ ತಾಲೂಕು ಆಡಳಿತ. ಆದರೆ ತಿ.ನರಸೀಪುರ ಪಟ್ಟಣದ ಮೆಟ್ರಿಕ್ ನಂತರದ ಬಾಲಕರ ವಿದ್ಯಾರ್ಥಿ ನಿಲಯದಲ್ಲಿ ಕ್ವಾರಂಟೈನ್ ಗೆ ಅವರು ವಿರೋಧ ವ್ಯಕ್ತಪಡಿಸಿದ್ದಾರೆ.

ಹಾಸ್ಟೆಲ್ ಬಳಿ ಆಗಮಿಸಿ ಕ್ವಾರಂಟೈನ್ ಗೆ ವಿರೋಧ ವ್ಯಕ್ತಪಡಿಸಿದ ಮಹಿಳೆಯರು. ತಹಶೀಲ್ದಾರ್ ನಾಗೇಶ್ ಅವರಿಗೆ ಮನವಿ ಸಲ್ಲಿಸಿದ ನರಸೀಪುರ ಜನತೆ.  ಪಟ್ಟಣದ ಹೃದಯ ಭಾಗದಲ್ಲಿ ಹೋಂ ಕ್ವಾರಂಟೈನ್ ಬೇಡ. ಸುತ್ತಮುತ್ತಲಿನ ಜನತೆ ಈಗಾಗಲೇ ಭಯದಿಂದ ಜೀವನ ನಡೆಸುತ್ತಿದ್ದಾರೆ.  ಕೂಡಲೇ ಕ್ವಾರಂಟೈನ್ ಮಾಡಿರುವ ಜನರನ್ನು ಸ್ಥಳಾಂತರ ಮಾಡುವಂತೆ ಗ್ರಾಮಸ್ಥರ ಮನವಿ.