Saturday, September 12, 2026

BDA Apartments

ಅಕ್ರಮವಾಗಿ ಹುಲಿಯ ಉಗುರು, ಹಲ್ಲುಗಳ ಮಾರಾಟಕ್ಕೆ ಯತ್ನ: ಮೂವರ ಬಂಧನ BDA JK_Adv BDA Adv
Home Front Page ಅಕ್ರಮವಾಗಿ ಹುಲಿಯ ಉಗುರು, ಹಲ್ಲುಗಳ ಮಾರಾಟಕ್ಕೆ ಯತ್ನ: ಮೂವರ ಬಂಧನ

ಅಕ್ರಮವಾಗಿ ಹುಲಿಯ ಉಗುರು, ಹಲ್ಲುಗಳ ಮಾರಾಟಕ್ಕೆ ಯತ್ನ: ಮೂವರ ಬಂಧನ

ಚಾಮರಾಜನಗರ,ಆಗಸ್ಟ್,12,2026 (www.justkannada.in): ಅಕ್ರಮವಾಗಿ ಹುಲಿಯ ಹಲ್ಲು ಮತ್ತು ಉಗುರುಗಳನ್ನು ಸಂಗ್ರಹಿಸಿ ಮಾರಾಟಕ್ಕೆ ಯತ್ನಿಸಿದ್ದ ಮೂವರನ್ನು ಅರಣ್ಯ ಇಲಾಖೆ ಅಧಿಕಾರಿಗಳು ಬಂಧಿಸಿದ್ದಾರೆ.

ಹೊಸಪೋಡು ಗ್ರಾಮದ  ಮಹದೇವ ಬಿನ್ ಜಡಿಯ, , ಮಾವತ್ತೂರು ಗ್ರಾಮದ ರಮೇಶ , ವಡೆಯರಪಾಳ್ಯದ ಮಣಿ ಬಂಧಿತ ಆರೋಪಿಗಳು  ಆರೋಪಿತರಿಂದ 4 ಹುಲಿಯ ಕೋರೆ ಹಲ್ಲುಗಳು, 2 ದವಡೆ ಹಲ್ಲುಗಳು, 1 ಹುಲಿಯ ಉಗುರು ಮತ್ತು 1 ಆಟೋವನ್ನು ಅರಣ್ಯಾಧಿಕಾರಿಗಳು ವಶಪಡಿಸಿಕೊಂಡಿದ್ದಾರೆ,ಅಕ್ರಮವಾಗಿ ಹುಲಿಯ ಉಗುರು tiger

ಆರೋಪಿಗಳನ್ನು ವಿಚಾರಣೆಗೆ ಒಳಪಡಿಸಿದಾಗ ಅವರು ವನ್ಯಜೀವಿ ಅಂಗಾಂಗಗಳನ್ನು ಅಕ್ರಮವಾಗಿ ಸಂಗ್ರಹಿಸಿ ಮಾರಾಟ ಮಾಡಲು ಯತ್ನಿಸುತ್ತಿದ್ದುದರ ಬಗ್ಗೆ ಹೇಳಿಕೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ವನ್ಯಜೀವಿ ಸಂರಕ್ಷಣಾ ಕಾಯ್ದೆ 1972ರಡಿಯಲ್ಲಿ ಮೊಕದ್ದಮೆಯನ್ನು ದಾಖಲಿಸಿ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಮತ್ತು ವಶಪಡಿಸಿಕೊಂಡ ಹುಲಿ ಉಗುರು, ಹಲ್ಲುಗಳನ್ನು ಸುರಕ್ಷಿತವಾಗಿ ಅರಣ್ಯ ಇಲಾಖೆಯ ವಶದಲ್ಲಿ ಇರಿಸಿಕೊಳ್ಳಲಾಗಿದೆ ಎಂದು  ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶ ಉಪ ಸಂರಕ್ಷಣಾಧಿಖಾರಿ ಹಾಗೂ ನಿರ್ದೇಶಕರು ತಿಳಿಸಿದ್ದಾರೆ.

ಕಾರ್ಯಾಚರಣೆಯನ್ನು ಶುಭಂ ಸಿಂಗ್ ತನ್ವರ್, ಭಾ.ಅ.ಸೇ., ಉಪ ಅರಣ್ಯ ಸಂರಕ್ಷಣಾಧಿಕಾರಿಗಳು ಹಾಗೂ ನಿರ್ದೇಶಕರು, ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶ ರವರ ನಿರ್ದೇಶನದ ಮೇರೆಗೆ. ಮಂಜುನಾಥ್, ಎಂ. ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ, ವಿಶೇಷ ಹುಲಿ ಸಂರಕ್ಷಣಾ ದಳ, ಬಂಡೀಪುರ-ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶ,. ಕೆ. ಪಿ. ಸತೀಶ್ ಕುಮಾರ್, ವಲಯ ಅರಣ್ಯಾಧಿಕಾರಿ, ಜಿ.ಎಸ್. ಬೆಟ್ಟ ವಲಯ, ವೆಂಕಟೇಶ್, ವಲಯ ಅರಣ್ಯಾಧಿಕಾರಿ, ವಿಶೇಷ ಹುಲಿ ಸಂರಕ್ಷಣಾ ದಳ, ಜ್ಞಾನಶೇಖರ ಎಂ, ಉಪ ವಲಯ ಅರಣ್ಯಾಧಿಕಾರಿ,  ಕಾರ್ತಿಕ್ ಯಾದವ್, ಉಪ ವಲಯ ಅರಣ್ಯಾಧಿಕಾರಿ, ವಿಶೇಷ ಹುಲಿ ಸಂರಕ್ಷಣಾ ದಳ ಮತ್ತು ಶ್ರೀಕಾಂತ್, ಉಪ ವಲಯ ಅರಣ್ಯಾಧಿಕಾರಿ ಹಾಗೂ ವಿಶೇಷ ಹುಲಿ ಸಂರಕ್ಷಣಾ ದಳ ಮತ್ತು ಜಿ.ಎಸ್. ಬೆಟ್ಟ ವಲಯದ ಸಿಬ್ಬಂದಿಗಳೊಂದಿಗೆ ಯಶಸ್ವಿಯಾಗಿ ಕೈಗೊಳ್ಳಲಾಗಿತ್ತು.ಹಲ್ಲುಗಳ ಮಾರಾಟಕ್ಕೆ ಯತ್ನ jk02_new jk02 new

Key words: Three arrested, illegally, sell, tiger teeth , claws, Bandipur