Saturday, September 5, 2026

BDA Apartments

Home Cinema ಕಾರ್, ಬೈಕ್, ಸೈಕಲ್ ಗೆ ಬೆಂಕಿ ಹಚ್ಚಿದ್ದ ಮೂವರು ಅಂದರ್.

ಕಾರ್, ಬೈಕ್, ಸೈಕಲ್ ಗೆ ಬೆಂಕಿ ಹಚ್ಚಿದ್ದ ಮೂವರು ಅಂದರ್.

ಮೈಸೂರು,ನವೆಂಬರ್,9,2024 (www.justkannada.in): ಕಾರ್, ಬೈಕ್, ಸೈಕಲ್ ಗೆ ಬೆಂಕಿ ಹಚ್ಚಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಹುಣಸೂರು ಗ್ರಾಮಾಂತರ ಠಾಣಾ ಪೊಲೀಸರು ಬಂಧಿಸಿದ್ದಾರೆ

ಮುತ್ತುರಾಯನಹೊಸಳ್ಳಿ ಗ್ರಾಮದ ಕುಮಾರ್, ಚಂದ್ರೆಗೌಡ, ಆನಂದೂರು ಗ್ರಾಮದ ಮಂಜು ಬಂಧಿತ ಆರೋಪಿಗಳು. ಹುಣಸೂರು ತಾಲ್ಲೂಕಿನ ಮುತ್ತುರಾಯನಹೊಸಳ್ಳಿ ಗ್ರಾಮದಲ್ಲಿ ಅಕ್ಟೊಬರ್ 16ರಂದು ಘಟನೆ ನಡೆದಿತ್ತು.

ಹಳೆ ದ್ವೇಷ ಹಿನ್ನೆಲೆ  ಮನುಕುಮಾರ್ ಎಂಬುವರ ಮನೆಯಲ್ಲಿದ್ದ ಸಿಸಿಟಿವಿ, ಬೈಕ್, ಕಾರ್, ಸೈಕಲ್ ಗೆ ಕಿಡಿಗೇಡಿಗಳು ಬೆಂಕಿ ಹಚ್ಚಿದ್ದರು. ಘಟನೆ ಸಂಬಂಧ ಹುಣಸೂರು ಗ್ರಾಮಾಂತರ ಪೊಲೀಸ್ ಠಾಣೆಗೆ ಮನೆ ಮಾಲೀಕ ಮನುಕುಮಾರ್ ದೂರು ನೀಡಿದ್ದರು. ಇದೀಗ ಆರೋಪಿಗಳ ಎಡೆಮುರಿ ಕಟ್ಟುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

Key words: Three, arrested, fire,  car, bike and bicycle