ಅಡಿಕೆ ಕದಿಯಲು ಬಂದ ಕಳ್ಳನಿಗೆ ಗುಂಡಿಕ್ಕಿ ಹತ್ಯೆ…

ಕೊಡಗು,ಆ,30,2019(www.justkannada.in): ಅಡಿಕೆ ಕದಿಯಲು ಬಂದ ಕಳ್ಳನಿಗೆ ಗುಂಡಿಕ್ಕಿ ಹತ್ಯೆಮಾಡಿರುವ ಘಟನೆ ಕೊಡಗು ಜಿಲ್ಲೆಯಲ್ಲಿ ನಡೆದಿದೆ.

ಮಡಿಕೇರಿ ತಾಲೂಕಿನ ಕರಿಕೆ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಗಣೇಶ್  ಎಂಬಾತನೇ ಅಡಿಕೆ ಕದಿಯಲು ಹೋಗಿ ಸಾವನ್ನಪ್ಪಿದ ಕಳ್ಳ. ಕರಿಕೆ ಗ್ರಾಮದ ಮೋಣ್ಣಪ್ಪ ಮನೆಯಲ್ಲಿ ಅಡಿಕೆ ಕದಿಯಲು ಗಣೇಶ್ ಹೋಗಿದ್ದನು ಎನ್ನಲಾಗಿದೆ. ಈದೇ ವೇಳೆ ಕಳ್ಳನಿಗೆ ಮೋಣ್ಣಪ್ಪ ಗುಂಡು ಹಾರಿಸಿದ್ದು ಗಣೇಶ್ ಸಾವನ್ನಪ್ಪಿದ್ದಾನೆ.

ಘಟನಾ ಸ್ಥಳಕ್ಕೆ ಭಾಗಮಂಡಲ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Key words:  thief -shoot –dead-madikeri