Sunday, August 23, 2026

BDA Apartments

Home Front Page ಸಚಿವನಾದ ಮೇಲೆ ಸಂತಸ:  ‘ಕೈ’ ನಾಯಕರ ಮೇಲೆ ಯಾವುದೇ ಅಸಮಾಧಾನವಿಲ್ಲ ಎಂದ ಸಚಿವ ಎಂಟಿಬಿ ನಾಗರಾಜ್…

ಸಚಿವನಾದ ಮೇಲೆ ಸಂತಸ:  ‘ಕೈ’ ನಾಯಕರ ಮೇಲೆ ಯಾವುದೇ ಅಸಮಾಧಾನವಿಲ್ಲ ಎಂದ ಸಚಿವ ಎಂಟಿಬಿ ನಾಗರಾಜ್…

ಬೆಂಗಳೂರು,ಮೇ,30,2019(www.justkannada.in):  ಕಾಂಗ್ರೆಸ್ ನಾಯಕರ ಮೇಲೆ ನನಗೆ ಯಾವುದೇ ಅಸಮಾಧಾನವಿಲ್ಲ ಎಂದು ವಸತಿ ಸಚಿವ ಎಂಟಿಬಿ ನಾಗರಾಜ್ ಹೇಳಿದ್ದಾರೆ.

ಬೆಂಗಳೂರಿನಲ್ಲಿ ಇಂದು ಮಾತನಾಡಿದ ಸಚಿವ ಎಂಟಿಬಿ ನಾಗರಾಜ್, ತಿಂಗಳೂ ಅಥವಾ ಮೂರು ದಿನವೋ ದಿನವೂ ಸಚಿವ ನಾಗಬೇಕಿತ್ತು. ಆಗಿದ್ದೇನೆ. ನಾನು ಸಚಿವನಾದ ಮೇಲೆ ಸಂತೋಷವಾಗಿದ್ದೇನೆ. ಕಾಂಗ್ರೆಸ್ ನಾಯಕರ ಮೇಲೆ ನನಗೆ ಯಾವುದೇ ಮುನಿಸು ಇಲ್ಲ ಎಂದರು.

ಇನ್ನು ಸಮನ್ವಯ ಸಮಿತಿ ಸಭೆಯಿಂದ ಬೇಗ ಹೋಗಿದ್ದಕ್ಕೆ ಕಾರಣ ನೀಡಿದ ಸಚಿವ ಎಂಬಿಟಿ ನಾಗರಾಜ್,  ಸಮನ್ವಯ ಸಮಿತಿ ಸಭೆಯಿಂದ ಬೇಗ ಹೋಗಿದ್ದು ನಿಜ. ಖಾಸಗಿ ಕಾರ್ಯಕ್ರಮವಿತ್ತು. ಹೀಗಾಗಿ ಸಭೆಯಿಂದ ಬೇಗ ಹೋಗಿದ್ದೆ. ಇದರಲ್ಲಿ ಯಾವುದೇ ಗೊಂದಲವಿಲ್ಲ ಎಂದರು.

ಅತೃಪ್ತ ಶಾಸಕರನ್ನ ಸಮಾಧಾನಪಡಿಸುವ ಉದ್ದೇಶದಿಂದ ಸಮ್ಮಿಶ್ರ ಸರ್ಕಾರದಲ್ಲಿ ಕೆಲ ಸಚಿವರಿಗೆ ಕೋಕ್ ನೀಡಿ ಆಸ್ಥಾನವನ್ನ ಅತೃಪ್ತ ಶಾಸಕರಿಗೆ ನೀಡಲು  ಮೈತ್ರಿ ಪಕ್ಷಗಳು ನಿರ್ಧರಿಸಿವೆ ಎನ್ನಲಾಗಿದೆ. ಈ ನಡುವೆ ಮೈತ್ರಿ ಸರ್ಕಾರ ಉಳಿವಿಗೆ  ಸಚಿವ ಸ್ಥಾನ ತ್ಯಾಗಕ್ಕೂ ಸಿದ್ಧ ಎಂದು ಸಚಿವರಾದ ಜಮೀರ್ ಅಹ್ಮದ್ ಖಾನ್ ಮತ್ತು ಯುಟಿ ಖಾದರ್ ತಿಳಿಸಿದ್ದಾರೆ.

Key words: There is no disagreement with Congress leaders- Minister MTB Nagaraj.

#MTBNagaraj  #disagreement #Congresseaders #alliancegovernment