ಬಿಡುಗಡೆಯಾಗದ ಕೋಟಿಗೊಬ್ಬ-3 ಸ್ಪಷ್ಟನೆ ನೀಡಿದ ಸುದೀಪ್

ಬೆಂಗಳೂರು, ಅಕ್ಟೋಬರ್ 14, 2021 (www.justkannada.in): ಬಹು ನಿರೀಕ್ಷಿತ ಕೋಟಿಗೊಬ್ಬ 3 ಇಂದು ಬಿಡುಗಡೆಯಾಗಿಲ್ಲ. ಈ ಸಂಬಂಧ ಚಿತ್ರದ ನಿರ್ಮಾಪಕ ಸೂರಪ್ಪ ಬಾಬು ಹಾಗೂ ನಟ ಕಿಚ್ಚ ಸುದೀಪ್ ಸ್ಪಷ್ಟನೆ ನೀಡಿದ್ದಾರೆ.

ಟ್ವಿಟ್ಟರ್ ನಲ್ಲಿ ಕ್ಷಮೆಯಾಚಿಸಿರುವ ಸುದೀಪ್, ಈಗಾಗಲೇ ಥಿಯೇಟರ್​ಗಳ ಬಳಿ ಆಗಮಿಸಿರುವ ಎಲ್ಲ ಅಭಿಮಾನಿಗಳಿಗೂ ಶೋ ತಡವಾದ ಬಗ್ಗೆ ತಿಳಿಸುವುದು ನನ್ನ ಕರ್ತವ್ಯವಾಗಿದೆ ಎಂದಿದ್ದಾರೆ.

ತಾಂತ್ರಿಕ ಸಮಸ್ಯೆಯಿಂದ ಸಿನಿಮಾ ತೋರಿಸಲು ಆಗುತ್ತಿಲ್ಲ. ಕೆಲವರ ಬೇಜವಾಬ್ದಾರಿಯಿಂದ ಈ ರೀತಿ ಆಗಿದೆ. ಸಿನಿಮಾ ಮತ್ತೆ ಯಾವಾಗ ಪ್ರದರ್ಶನ ಆಗುತ್ತೆ ಅನ್ನೋದನ್ನ ಮತ್ತೆ ನಾನು ನಿಮಗೆ ತಿಳಿಸುತ್ತೇನೆ ಎಂದು ಸುದೀಪ್ ಸ್ಪಷ್ಟನೆ ನೀಡಿದ್ದಾರೆ.