Sunday, August 16, 2026

BDA Apartments

Home Front Page ಕೋವಿಡ್ ಸಂಕಷ್ಟದ ಸಮಯದಲ್ಲಿ ತುಸು ನಿರಾಳ ನೀಡಿದ ತೆರಿಗೆ ಇಲಾಖೆ

ಕೋವಿಡ್ ಸಂಕಷ್ಟದ ಸಮಯದಲ್ಲಿ ತುಸು ನಿರಾಳ ನೀಡಿದ ತೆರಿಗೆ ಇಲಾಖೆ

ಬೆಂಗಳೂರು, ಜೂನ್ 26, 2021 (www.justkannada.in)ಕೋವಿಡ್ ಸಂಕಷ್ಟದ ಸಮಯದಲ್ಲಿ ನೇರ ತೆರಿಗೆಗಳ ಕೇಂದ್ರೀಯ ಮಂಡಳಿ ಜನ ಸಾಮಾನ್ಯರಿಗೆ ತುಸು ನೆಮ್ಮದಿ ಸುದ್ದಿ ನೀಡಿದೆ.

ಕೋವಿಡ್-19 ಚಿಕಿತ್ಸೆಗಾಗಿ ಉದ್ಯೋಗದಾತರು ಉದ್ಯೋಗಿಗಳಿಗೆ ನೀಡುವ ಮೊತ್ತಕ್ಕೆ ತೆರಿಗೆಯಿಂದ ವಿನಾಯಿತಿ ನೀಡಿದೆ.

ಕೋವಿಡ್ ನಿಂದ ಉದ್ಯೋಗಿಗಳು ಸಾವನ್ನಪ್ಪಿದರೆ ಕುಟುಂಬ ಸದಸ್ಯರು ಉದ್ಯೋಗದಾತರಿಂದ ಪಡೆದ ನಷ್ಟ ಪರಿಹಾರ ಪಾವತಿಗಳಿಗೆ 2019-20ರ ಹಣಕಾಸು ಮತ್ತು ನಂತರದ ವರ್ಷಗಳಲ್ಲಿ ಆದಾಯ ತೆರಿಗೆಯಿಂದ ವಿನಾಯಿತಿ ಸಿಗಲಿದೆ.

ತೆರಿಗೆದಾರರ ಅನುಸರಣಾ ಹೊರೆಯನ್ನು ಕಡಿಮೆ ಮಾಡುವ ಸಲುವಾಗಿ, ಪರಿಹಾರಗಳನ್ನು ಒದಗಿಸಲಾಗುತ್ತಿದೆ’ ಎಂದು ನೇರ ತೆರಿಗೆಗಳ ಕೇಂದ್ರೀಯ ಮಂಡಳಿ (ಸಿಬಿಡಿಟಿ) ತನ್ನ ಹೇಳಿಕೆಯಲ್ಲಿ ತಿಳಿಸಿದೆ.

ಕೋವಿಡ್-19 ಚಿಕಿತ್ಸೆಗಾಗಿ ಮಾಡಿದ ವೆಚ್ಚಗಳನ್ನು ಪೂರೈಸಲು ಅನೇಕ ತೆರಿಗೆದಾರರು ತಮ್ಮ ಉದ್ಯೋಗದಾತರು ಮತ್ತು ಹಿತೈಷಿಗಳಿಂದ ಆರ್ಥಿಕ ಸಹಾಯವನ್ನು ಪಡೆದಿದ್ದಾರೆ ಎಂದು ತೆರಿಗೆ ಇಲಾಖೆ ಹೇಳಿದೆ.

Income-Tax-exception-Any-no change-Minister- Finance-Nirmala Sitharaman
ಕೃಪೆ : internet