ಬಂಡೀಪುರದ ರಾಂಪುರ ಆನೆ ಶಿಬಿರದಲ್ಲೂ ‘ದಿ ಎಲಿಫೆಂಟ್ ವಿಸ್ಪರರ್ಸ್’ ಸ್ಟೋರಿ !

ಮೈಸೂರು, ಜುಲೈ 16, 2023 (www.justkannada.in): ಅನಾಥ  ಮರಿಯಾನೆ ಪೋಷಣೆಗೆ ಸೋಲಿಗ ದಂಪತಿ ಮುಂದಾಗಿ ಗಮನ ಸೆಳೆದಿದ್ದಾರೆ.

ಮಾನವೀಯತೆ ಮೆರೆಯುತ್ತಿರುವ  ಕಾವಾಡಿ ದಂಪತಿಗೆ ಪ್ರಧಾನಿ ಮೋದಿ ಅವರಿಂದ  ಮೆಚ್ಚುಗೆಗೆ ಪಾತ್ರರಾದ  ಮಧುಮಲೈ ಆನೆ ಶಿಬಿರದ  ಬೆಳ್ಳಿ ಮತ್ತು ಬೊಮ್ಮ ದಂಪತಿ ಇವರಿಗೆ ಪ್ರೇರಣೆಯಾಗಿದ್ದಾರೆ.

ಇತ್ತೀಚೆಗೆ ಆಸ್ಕರ್ ಪ್ರಶಸ್ತಿ ವಿಜೇತ  ದಿ ಎಲಿಫೆಂಟ್ ವಿಸ್ಪರರ್ಸ್ ಕಿರುಚಿತ್ರದ ಪ್ರೇರಣೆಯಿಂದ ಬಂಡೀಪುರದ ರಾಂಪುರ ಆನೆ ಶಿಬಿರದಲ್ಲೂ  ತಬ್ಬಲಿ ಆನೆ ಮರಿಗೆ ರಮ್ಯ ಮತ್ತು ರಾಜು ದಂಪತಿ ಆಸರೆಯಾಗಿದ್ದಾರೆ.

ಮಧುಮಲೈ ಆನೆ ಶಿಬಿರದಲ್ಲಿ ಬೆಳ್ಳಿ ಮತ್ತು ಬೊಮ್ಮ ದಂಪತಿಯಂತೆ ಅನಾಥ ಆನೆ ಮರಿಯ ಲಾಲನೆ ಪೋಷಣೆ ಮಾಡುತ್ತಿರುವ ಕಾವಾಡಿ ದಂಪತಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಕಳೆದ 7 ತಿಂಗಳ ಹಿಂದೆ ತಾಯಿಯಿಂದ ಬೇರ್ಪಟ್ಟ ಮರಿಯಾನೆಯನ್ನು ಇವರು ಪೋಷಣೆ ಮಾಡುತ್ತಿದ್ದಾರೆ. ತಾಯಿಯಿಂದ ಬೇರ್ಪಟ್ಟಾಗ ಕೇವಲ 14 ದಿನಗಳ ಮರಿ ತಂದು ಲಾಲನೆ ಪೋಷಣೆ ಮಾಡುತ್ತಿರುವ ದಂಪತಿ ಇದಕ್ಕೆ ವೇದ ಎಂಬ ಹೆಸರಿಟ್ಟು ಪೋಷಣೆ ಮಾಡುತ್ತಿದ್ದಾರೆ.

ದಂಪತಿಗಳ ನಿಸ್ವಾರ್ಥ ಸೇವೆಗೆ ಬಂಡಿಪುರ ಅರಣ್ಯ ಅಧಿಕಾರಿಗಳ ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ಮರಿಯಾನೆ ಪೋಷಣೆಗೆ  ಬೇಕಾದ ಆರ್ಥಿಕ ಸಹಾಯವನ್ನು ಅರಣ್ಯ ಇಲಾಖೆ ಅಧಿಕಾರಿಗಳು ಮಾಡುತ್ತಿದ್ದಾರೆ.