ಏಳು ವರ್ಷಗಳ ಬಳಿಕ ಟೆಸ್ಟ್ ಕ್ರಿಕೆಟ್: ಇಂಗ್ಲೆಂಡ್’ನಲ್ಲಿ ಇಂದಿನಿಂದ ವನಿತೆಯರ ಟೆಸ್ಟ್ ಕದನ

ಬೆಂಗಳೂರು, ಜೂನ್ 16, 2021 (www.justkannada.in): ಇಂಗ್ಲೆಂಡ್‌ ನೆಲದಲ್ಲಿ ಮಿಥಾಲಿ ಬಳಗ ಇಂಗ್ಲೆಂಡ್‌ ವಿರುದ್ಧ ಟೆಸ್ಟ್‌ ಪಂದ್ಯವಾಡಲು ಕ್ಷಣಗಣನೆ ಆರಂಭವಾಗಿದೆ.

ಏಳು ವರ್ಷಗಳ ಬಳಿಕ ವನಿತೆಯರಿಗೆ ಟೆಸ್ಟ್‌  ಆಡುತ್ತಿದ್ದು, 2014ರ ಬಳಿಕ ಮೊದಲ ಟೆಸ್ಟ್‌ ಅನ್ನು ಟೀಂ ಇಂಡಿಯಾ ವನಿತೆಯರು ಆಡಲಿದ್ದಾರೆ.

ಭಾರತ 2014ರಲ್ಲಿ ಪ್ರವಾಸಿ ದಕ್ಷಿಣ ಆಫ್ರಿಕಾ ವಿರುದ್ಧ ಮೈಸೂರಿನಲ್ಲಿ ತನ್ನ ಕೊನೆಯ ಟೆಸ್ಟ್‌ ಆಡಿತ್ತು. ಅಂದು ಕೂಡ ಮಿಥಾಲಿ ಅವರೇ ಭಾರತದ ನಾಯಕಿ ಆಗಿದ್ದರು.

ಇಂಗ್ಲೆಂಡಿಗೆ ಹೋಲಿಸಿದರೆ ಭಾರತ ಹೆಚ್ಚು ಅನುಭವಿ ಅಲ್ಲ. 7 ವರ್ಷಗಳಿಂದ ಟೆಸ್ಟ್‌ ಆಡಿಲ್ಲ ಎಂಬುದಷ್ಟೇ ಒಂದು ಕೊರತೆ.ಇದು ಯುವ ಆಟಗಾರ್ತಿಯರಿಗೆ ಸವಾಲಾಗಲಿದೆ.