ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ಸ್: ಟೀಂ ಇಂಡಿಯಾದಿಂದ ಕೆ.ಎಲ್.ರಾಹುಲ್, ಮಾಯಾಂಕ್ ಅಗರ್ವಾಲ್ ಕೈಬಿಟ್ಟಿದ್ದೇಕೆ?!

ಬೆಂಗಳೂರು, ಜೂನ್ 16, 2021 (www.justkannada.in): ಐಸಿಸಿ ವಿಶ್ವಕಪ್‌ ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್‌ಗಾಗಿ ಭಾರತದ ತಂಡವನ್ನು ಪ್ರಕಟಿಸಲಾಗಿದೆ.

15 ಸದಸ್ಯರ ತಂಡದಲ್ಲಿ ಕನ್ನಡಿಗ ಕೆ.ಎಲ್.ರಾಹುಲ್ ಅವರನ್ನು ಕೈಬಿಡಲಾಗಿದೆ. ಜತೆಗೆ ಮಾಯಾಂಕ್‌ ಅಗರ್ವಾಲ್‌, ಶಾರ್ದೂಲ್‌ ಠಾಕೂರ್‌, ಅಕ್ಷರ್‌ ಮತ್ತು ವಾಷಿಂಗ್ಟನ್‌ ಸುಂದರ್‌ ಕೂಡ ಅವಕಾಶ ವಂಚಿತರಾಗಿದ್ದಾರೆ,

ಅಗರ್ವಾಲ್‌ ಐಸಿಸಿ ಟೆಸ್ಟ್‌ ಚಾಂಪಿಯನ್‌ಶಿಪ್‌ನಲ್ಲಿ ಉತ್ತಮ ಬ್ಯಾಟಿಂಗ್‌ ದಾಖಲೆ ಹೊಂದಿರುವ ಆರಂಭಿಕ. ಅವರು 12 ಪಂದ್ಯಗಳಿಂದ 857 ರನ್‌ ಬಾರಿಸಿದ್ದಾರೆ. ರಾಜ್ಯದ ಮತ್ತೂಬ್ಬ ಆಟಗಾರ ಕೆ.ಎಲ್‌. ರಾಹುಲ್‌ ಅವರನ್ನೂ ಕಡೆಗಣಿಸಲಾಗಿದೆ.

ಶುಭಮನ್‌ ಗಿಲ್‌ ಕಾಣಿಸಿಕೊಂಡಿರುವುದರಿಂದ ಅವರು ರೋಹಿತ್‌ ಶರ್ಮ ಜತೆಗೆ ಆರಂಭಿಕನಾಗಿ ಕಣಕ್ಕಿಳಿಯುವುದು ಖಚಿತ.

ಭಾರತ ತಂಡ: ವಿರಾಟ್‌ ಕೊಹ್ಲಿ (ನಾಯಕ), ರೋಹಿತ್‌ ಶರ್ಮ, ಶುಭಮನ್‌ ಗಿಲ್‌, ಚೇತೇಶ್ವರ್‌ ಪೂಜಾರ, ಅಜಿಂಕ್ಯ ರಹಾನೆ, ರಿಷಭ್‌ ಪಂತ್‌, ಹನುಮ ವಿಹಾರಿ, ಆರ್‌. ಅಶ್ವಿ‌ನ್‌, ರವೀಂದ್ರ ಜಡೇಜ, ವೃದ್ಧಿಮಾನ್‌ ಸಾಹಾ, ಜಸ್‌ಪ್ರೀತ್‌ ಬುಮ್ರಾ, ಉಮೇಶ್‌ ಯಾದವ್‌, ಶಮಿ, ಇಶಾಂತ್‌ ಶರ್ಮ, ಮೊಹಮ್ಮದ್‌ ಸಿರಾಜ್‌.