‘ಅಭಿವೃದ್ಧಿಗೊಸ್ಕರ ಸುಧಾಕರ್ ರನ್ನ ಗೆಲ್ಲಿಸಿ’- ಚಿಕ್ಕಬಳ್ಳಾಪುರದಲ್ಲಿ ತೆಲುಗಿನ ಖ್ಯಾತ ಹಾಸ್ಯನಟ ಬ್ರಹ್ಮನಂದಂ ಮನವಿ…

ಚಿಕ್ಕಬಳ್ಳಾಪುರ,ನ,30,2019(www.justkannada.in): ರಾಜ್ಯದಲ್ಲಿನ 15 ಕ್ಷೇತ್ರಗಳ ಉಪಚುನಾವಣಾ ಕಣ ರಂಗೇರಿದ್ದು ಈ ನಡುವೆ ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಡಾ.ಸುಧಾಕರ್ ಪರ ತೆಲುಗಿನ ಹಾಸ್ಯ ನಟ ಬ್ರಹ್ಮನಂದಂ ಮತಯಾಚಿಸಿದ್ದಾರೆ.

ಬಿಜೆಪಿ ಅಭ್ಯರ್ಥಿ ಪರ ಡಾ.ಸುಧಾಕರ್  ಪರ ಪ್ರಚಾರಕ್ಕೆ ಚಿಕ್ಕಬಳ್ಳಾಪುರಕ್ಕೆ ಆಗಮಿಸಿದ  ತೆಲುಗಿನ ಖ್ಯಾತ ಹಾಸ್ಯನಟ ಬ್ರಹ್ಮನಂದಂರನ್ನ  ನೋಡಲು ಅಭಿಮಾನಿಗಳು ಮುಗಿಬಿದ್ದರು. ಅಲ್ಲದೆ ಅವರ ಜತೆ ಅಭಿಮಾನಿಗಳು ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಮುಂದಾಗಿದ್ದು ನೂಕು ನುಗ್ಗಲು ಉಂಟಾಗಿತ್ತು.

ಚಿಕ್ಕಬಳ್ಳಾಪುರ ತಾಲ್ಲೂಕು ಪೆರೇಸಂದ್ರದಲ್ಲಿ ಬಿಜೆಪಿ ಅಭ್ಯರ್ಥಿ ಡಾ.ಸುಧಾಕರ್ ಪರ ಪ್ರಚಾರ ನಡೆಸಿದ  ಬ್ರಹ್ಮಾನಂದಂ,  ಡಾ. ಸುಧಾಕರ್ ಗೆ ಮತ ನೀಡಿ, ಅಭಿವೃದ್ಧಿಗೊಸ್ಕರ ಸುಧಾಕರರನ್ನ ಗೆಲ್ಲಿಸುವಂತೆ ಮನವಿ ಮಾಡಿದರು.  ಸುಧಾಕರ್ ಒಳ್ಳೆಯತನದ ಬಗ್ಗೆ ಹೇಳಲು ಹೈದರಾಬಾದ್ ನಿಂದ ಇಲ್ಲಿಗೆ ಬಂದಿರುವೆ ಸುಧಾಕರ್ ರನ್ನ ಗೆಲ್ಲಿಸಿದರೆ ವಿಜಯೋತ್ಸವದಲ್ಲಿ ಮತ್ತೊಮ್ಮೆ ಭಾಗವಹಿಸುತ್ತೇನೆ ಎಂದು ಹೇಳಿದರು.

ಆಂಧ್ರಪ್ರದೇಶದ ಗಡಿಗೆ ಹೊಂದಿಕೊಂಡಿರುವ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ತೆಲುಗು ಭಾಷಿಕರ ಪ್ರಭಾವ ಹೆಚ್ಚಾಗಿದ್ದು ಈ ಹಿನ್ನೆಲೆ ಡಾ.ಸುಧಾಕರ್ ಪರ ಬ್ರಹ್ಮಾನಂದಂ ಪ್ರಚಾರ ನಡೆಸಿದರು.

Key words: Telugu -comedian -Brahmanandam –Chikkaballapur-bjp candidate- sudhakar