ಬ್ಯಾಂಕಿಂಗ್ ನೇಮಕಾತಿ ಪರೀಕ್ಷೆ ಸಿದ‍್ಧತೆಗೆ ಕನ್ನಡಕೂಟದಿಂದ ಟೆಲಿಗ್ರಾಂ ಗ್ರೂಪ್.

ಬೆಂಗಳೂರು,ಜುಲೈ,15,2022(www.justkannada.in): ಬ್ಯಾಂಕಿಂಗ್​ ಕ್ಷೇತ್ರದಲ್ಲಿ ಆಸಕ್ತಿ ಹೊಂದಿರುವ ಅಭ್ಯರ್ಥಿಗಳಿಗೆ ಬ್ಯಾಂಕಿಂಗ್ ನೇಮಕಾತಿ ಪರೀಕ್ಷೆ ಎದುರಿಸಲು  ಸಿದ್ಧತೆ ಮತ್ತು ಕೋಚಿಂಗ್ ಅಗತ್ಯವಿರುತ್ತದೆ. ಈ ಮಧ್ಯೆ ಅಭ್ಯರ್ಥಿಗಳು ಪರೀಕ್ಷೆಗೆ ಹೇಗೆ ಸಿದ‍್ಧತೆ ಮಾಡಿಕೊಳ್ಳಬೇಕು ಎಂಬ ಮಾಹಿತಿ ನೀಡಲು ಕನ್ನಡಕೂಟ ಟೆಲಿಗ್ರಾಂ ಗ್ರೂಪ್ ಅನ್ನು ಶುರುಮಾಡಿದೆ.

ಕನ್ನಡ ಕೂಟ ಶುರುಮಾಡಿರುವ ಬ್ಯಾಂಕಿಂಗ್ ಪರೀಕ್ಷೆ ನೇಮಕಾತಿಗೆ ಸಿದ್ಧತೆ ಮಾಡುವ ಟೆಲಿಗ್ರಾಂ ಗುಂಪಿನಲ್ಲಿ 1600 ಅಭ್ಯರ್ಥಿ ಗಳು ಸೇರಿದ್ದಾರೆ. ಈ ಭಾನುವಾರ ದಿಂದ ಗುಂಪಿನಲ್ಲಿ ಮುಂದಿನ ಹಂತದ ಸಿದ್ಧತೆ ಶುರುವಾಗಲಿದ್ದು, ಈ ಸಿದ್ಧತೆಯಲ್ಲಿ ಕೂಟದ ತಂಡವಾಗಿ ಬಾಲಚಂದ್ರ,   ನವೀನ್( 9731388010) ಹಾಗೂ ಅಭಿಷೇಕ್ ಪೈ (9686119098) ಇವರು ಗುಂಪಿನಲ್ಲಿ ಅಧಿಕೃತವಾಗಿ ಸಿಗಲಿದ್ದು, ಗುಂಪಿನಲ್ಲಿ ಸೇರಿರುವ ಅಭ್ಯರ್ಥಿಗಳಿಗೆ ಪ್ರಶ್ನೋತ್ತರಗಳನ್ನು ನೀಡಲಿದ್ದಾರೆ, ಅಭ್ಯರ್ಥಿಗಳಲ್ಲಿ ಏನೇ ಗೊಂದಲ ಇದ್ದಲ್ಲಿ ಬಗೆಹರಿಸಿ ಕೊಳ್ಳಬಹುದಾಗಿದೆ.

ಇನ್ನೂ ಕೂಟದ ಟೆಲಿಗ್ರಾಂ ತಂಡಕ್ಕೆ ಸೇರಿರದ ಅಭ್ಯರ್ಥಿ ಗಳು  https://t.me/+ue_AR2duJFw5OWM1 ಈ ಲಿಂಕ್ ಮೂಲಕ ಸೇರ್ಪಡೆಗೊಂಡು ಬ್ಯಾಂಕಿಂಗ್ ನೇಮಕಾತಿ ಪರೀಕ್ಷೆಗೆ ಸಿದ್ಧತೆ ಬಗ್ಗೆ ಮಾಹಿತಿ ಪಡೆದುಕೊಳ್ಳಬಹುದು.

Key words: Telegram group -Kannadakoota – prepare -banking –recruitment- exam.