ಬಹುಭಾಷಾ ನಟ ಪ್ರತಾಪ್ ಪೋಥೆನ್ ನಿಧನ

ಬೆಂಗಳೂರು, ಜುಲೈ 15, 2022 (www.justkannada.in): ಬಹುಭಾಷಾ ನಟ ಪ್ರತಾಪ್ ಪೋಥೆನ್ ಹೃದಯಾಘಾತದಿಂದ ಇಂದು ಬೆಳಗ್ಗೆ ನಿಧನರಾಗಿದ್ದಾರೆ.

ಹಿಂದಿ, ತಮಿಳು, ಮಲಯಾಳಂ ಭಾಷೆಯಲ್ಲಿ 100ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿರುವ ಪ್ರತಾಪ್ ಪೋಥೆನ್‌ ಅವರಿಗೆ 70 ವರ್ಷ ವಯಸ್ಸಾಗಿತ್ತು.

ರಜನಿಕಾಂತ್, ಕಮಲ್ ಹಾಸನ್ ಸೇರಿದಂತೆ ಅನೇಕ ದಿಗ್ಗಜರೊಂದಿಗೆ ಅಭಿನಯಿಸಿದ್ದ ಪೋಥೆನ್, ಹಲವು ಹಿಟ್‌ ಚಿತ್ರಗಳನ್ನು ನಿರ್ದೇಶನ ಮಾಡಿದ್ದರು.

ತಮಿಳಿನ ‘ಮೀಂದುಮ್ ಒರು ಕಥಲ್ ಕಥೈ’, ‘ಮೂಡುಪನಿ’ ಮತ್ತು ‘ಪನ್ನೀರ್ ಪುಷ್ಪಂಗಳ್’ ಚಿತ್ರಗಳು ಪೋಥೆನ್‌ಗೆ ಹೆಸರು ತಂದುಕೊಟ್ಟಿವೆ.