ಬೆಂಗಳೂರು : ʼ ಸೂರ್ಯʼ ನ ತೇಜಸ್ಸಿಗೆ  ಗುರುರಾಘವೇಂದ್ರ ಅಡ್ಡಿ..!

During the last elections, MP Tejasvi Surya held a series of meetings with the same depositors and said that the money is not going anywhere.

 

ಬೆಂಗಳೂರು, ಏ.23, 2024 : (www.justkannada.in news )  ಅಂದಾಜು 46 ಸಾವಿರ ಠೇವಣಿದಾರರನ್ನ ಹೊಂದಿರುವ  ಪ್ರತಿಷ್ಟಿತ ಸಹಕಾರಿ ಬ್ಯಾಂಕ್ ನಲ್ಲಿ ಸುಮಾರು 2400 ಕೋಟಿ ರೂಪಾಯಿಗಳ ಹಗರಣದ ಆರೋಪ ಕೇಳಿ ಬಂದಿದೆ. ಇಲ್ಲಿ ಠೇವಣಿ ಮಾಡಿದ್ದ ಸುಮಾರು 200 ಮಂದಿ ಸತ್ತೇ ಹೋಗಿದ್ದಾರೆ ಇನ್ನು ಉಳಿದಿರುವವರು ತಮ್ಮ ಠೇವಣಿ ಹಣಕ್ಕಾಗಿ ಇನ್ನೂ ಹೋರಾಟ ನಡೆಸುತ್ತಲೇ ಇದ್ದಾರೆ.

ಅಂದಹಾಗೆ  ಇದು ರಾಜಧಾನಿ ಬೆಂಗಳೂರಿನ ಗುರು ರಾಘವೇಂದ್ರ ಕೋಆಪರೇಟಿವ್ ಬ್ಯಾಂಕಿನ ಹಗರಣ ಕಥೆ. ಈ ಹಗರಣ  ಮತ್ತೆ ಈಗ ಏಕೆ ಸದ್ದು ಮಾಡುತ್ತಿದೆ..? ಈ ಪ್ರಶ್ನೆಗೆ ಉತ್ತರ ಲೋಕಸಭಾ ಚುನಾವಣೆ ನಡೆಯುತ್ತಿರುವುದು.

ಹೌದು, ಕಳೆದ ಚುನಾವಣೆ ಸಂದರ್ಭದಲ್ಲಿ ಸಂಸದ ತೇಜಸ್ವಿ ಸೂರ್ಯ ಅವರು  ಇದೇ ಠೇವಣಿದಾರರ ನಿರಂತರ ಸಭೆ ನಡೆಸಿ ಹಣ ಎಲ್ಲಿಯೂ ಹೋಗುದಿಲ್ಲ. ಇನ್ನು 6 ತಿಂಗಳಲ್ಲಿ ಎಲ್ಲರಿಗೂ ಸಿಗುತ್ತದೆ. ಯಾರಿಗೂ ಅನ್ಯಾಯ ಆಗುವುದಿಲ್ಲ. ನ್ಯಾಯ ಕೊಡಿಸುತ್ತೇನೆ ಎಂದು ಹೇಳಿದ್ದರು. ಜತೆಗೆ ಠೇವಣಿದಾರರಿಗೆ ಹಣ ಹೇಗೆ ವಾಪಸ್ ಬರುತ್ತದೆ ಎಂದು ಪಿಪಿಟಿ ಮೂಲಕ ವಿವರಿಸುತ್ತೇನೆ ಎಂದೂ ಹೇಳಿದ್ದರು.

ಆದರೆ ಅವರ ಸಂಸದ ಅವಧಿ ಮುಗಿದು ಈಗ ಮತ್ತೆ ಹೊಸದಾಗಿ ಚುನಾವಣೆ ನಡೆಯುತ್ತಿದೆ. ಆದರೂ  ಠೇವಣ ಹಣ ವಾಪಸ್ ಬರುವ ಬಗ್ಗೆ ಮಾತನಾಡುತ್ತಲೇ ಇಲ್ಲ. ಬದಲಾಗಿ ಮತ್ತೆ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಿಂದ ಚುನಾವಣೆಯಲ್ಲಿ ಸ್ಪರ್ಧಿ ಮತ ಕೇಳುತ್ತಿದ್ದಾರೆ.

ಇದರಿಂದ ಸಿಟ್ಟಾಗಿರುವ ಠೇವಣಿದಾರರು ಮತ ನೀಡುವುದು ನಂತರ ನೋಡೋಣ ಮೊದಲು ಹೇಳಿದಂತೆ ನಡೆಯಬೇಕು. ನಮ್ಮ ಹಣ ವಾಪಸ್ ಕೊಡಿಸಬೇಕು ಎಂದು  ಕೂಗು ಎಬ್ಬಿಸಿದ್ದಾರೆ. ಹೀಗಾಗಿ ವಾರದ ಹಿಂದಷ್ಟೇ ಗುರು ರಾಘವೇಂದ್ರ ಕೋಆಪರೇಟಿವ್ ಬ್ಯಾಂಕ್ ನ ಠೇವಣಿದಾರರು ನಡೆಸಿದ ಸಭೆಯಲ್ಲಿ ಭಾಗವಹಿಸಲು ಬಂದಿದ್ದ ತೇಜಸ್ವಿ ಅವರು ಹಿಂಭಾಗಿಲಿಂದ ವಾಪಸ್ ಹೋಗಿ ದೊಡ್ಡ ಸುದ್ದಿಯಾಗಿತ್ತು.

 

ಏ.28ಕ್ಕೆ ಮತ್ತೆ ರಾಜ್ಯಕ್ಕೆ ಪ್ರಧಾನಿ ಮೋದಿ: ಎರಡು ದಿನ ಕ್ಯಾಂಪೇನ್.

 

ಇದೀಗ, ಈ ಅಂಶವೇ ತೇಜಸ್ವಿ ಸೂರ್ಯ ಅವರಿಗೆ ಚುನಾವಣೆಯಲ್ಲಿ ಕಬ್ಬಿಣದ ಕಡಲೆಯಾಗುವ ಲಕ್ಷ್ಮಣಗಳು ಗೋಚರಿಸುತ್ತಿವೆ. ಠೇವಣಿಧಾರರು ಆಕ್ರೋಶಗೊಂಡಿದ್ದು ಅದು ಚುನಾವಣೆಯಲ್ಲಿ ಪರಿಣಾಮ ಬೀರುವ ಸಾಧ್ಯತೆ ಕಡೆಗಣಿಸುವಂತಿಲ್ಲ.

ಕಾಂಗ್ರೆಸ್   ನೇತೃತ್ವದ ರಾಜ್ಯ ಸರಕಾರ ಸಿಬಿಐ ತನಿಖೆಗೆ ವಹಿಸಿ 5 ತಿಂಗಳಾಗಿದೆ.  ಆದರೂ ಈತನಕ ಕೇಂದ್ರ ಸರಕಾರದ ವ್ಯಾಪ್ತಿಯಲ್ಲಿರುವ ಸಿಬಿಐ ತನಿಖಾ ಅಧಿಕಾರಿಯನ್ನೇ ನೇಮಿಸಿಲ್ಲ. ಇದನ್ನು ತೇಜಸ್ವಿ ಸೂರ್ಯ ಏಕೆ ಪ್ರಶ್ನಿಸಲಿಲ್ಲ. ಕೇಂದ್ರಕ್ಕೆ ನೊಂದವರ ನಿಯೋಗದವನ್ನು ಏಕೆ ಕರೆದೊಯ್ಯಲಿಲ್ಲ . ಠೇವಣಿದಾರರು ಸಿಬಿಐ ಕಚೇರಿಗೆ ಅಲೆಯುತ್ತಿದ್ದಾರೆ. ಇವರಿಗೆ ಏಕೆ ತೇಜಸ್ವಿ ಸೂರ್ಯ ಏಕೆ ಸ್ಪಂಧಿಸುತ್ತಿಲ್ಲ ಎಂಬುದು ಠೇವಣಿದಾರರ ಪ್ರಶ್ನೆ.

key words: BJP , MP,  Tejasvi Surya, scam, co-operative bank, Bangalore

 

English summary:

The prestigious cooperative bank, which has an estimated 46,000 depositors, has been accused of a scam of around Rs 2,400 crore. Around 200 people who deposited here have died and the rest are still struggling for their deposits.

During the last elections, MP Tejasvi Surya held a series of meetings with the same depositors and said that the money is not going anywhere. In 6 months, everyone will get it. No one will be wronged. He said he would get justice. He also said that he will explain through PPT how the money will come back to the depositors.