Sunday, August 23, 2026

BDA Apartments

Home Cinema ನಟ ಪುನೀತ್ ರಾಜ್’ಕುಮಾರ್ ಕನಸಿನ ‘ಗಂಧದಗುಡಿ’ ಸಾಕ್ಷ್ಯಚಿತ್ರದ ಟೀಸರ್ ರಿಲೀಸ್

ನಟ ಪುನೀತ್ ರಾಜ್’ಕುಮಾರ್ ಕನಸಿನ ‘ಗಂಧದಗುಡಿ’ ಸಾಕ್ಷ್ಯಚಿತ್ರದ ಟೀಸರ್ ರಿಲೀಸ್

ಬೆಂಗಳೂರು, ಅಕ್ಟೋಬರ್ 9, 2022 (www.justkannada.in): ನಟ ಪುನೀತ್​ ರಾಜ್​ಕುಮಾರ್​ ಕನಸಿನ ‘ಗಂಧದಗುಡಿ’ ಸಾಕ್ಷ್ಯಚಿತ್ರದ ​​​ ಟೀಸರ್ ಯೂಟ್ಯೂಬ್​​​​ನಲ್ಲಿ ಇಂದು ಬಿಡುಗಡೆಯಾಗಿದೆ.

ಹೌದು ಬಹುನಿರೀಕ್ಷಿತ, ನಟ ಪುನೀತ್ ರಾಜಕುಮಾರ್ ಕನಸಿನ ಗಂಧದಗುಡಿ ವೈಲ್ಡ್ ಡಾಕ್ಯುಮೆಂಟರಿ ಟೀಸರ್​​ ಅಶ್ವಿನಿ ಪುನೀತ್ ರಾಜಕುಮಾರ್ ಬಿಡುಗಡೆ ಮಾಡಿದ್ದಾರೆ. ಈ ಸಾಕ್ಷ್ಯಚಿತ್ರಕ್ಕೆ ಎಲ್ಲೆಡೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.

ಇದೇ ತಿಂಗಳು 28ಕ್ಕೆ ಚಿತ್ರ ಬಿಡುಗಡೆಯಾಗಲಿದ್ದು, ಇಂದು ಟೀಸರ್ ರಿಲೀಸ್ ಮಾಡಲಾಗಿದೆ. ದೃಶ‍್ಯ ಕಾವ್ಯದಂತೆ ಇರುವ ಟೀಸರ್ ನಲ್ಲಿ ಅಪ್ಪು ಅವರ ಸಾಹಸ ಪ್ರವೃತ್ತಿಯನ್ನು ನೋಡಬಹುದಾಗಿದೆ.

ನಮ್ಮ ರಾಜ್ಯದಲ್ಲಿರುವ ವನ್ಯಜೀವಿಗಳು ಹಾಗೂ ಅರಣ್ಯ ಸಂಪತ್ತಿನ ಲೋಕವನ್ನು ಅನಾವರಣ ಮಾಡುವ ದೃಶ್ಯಗಳನ್ನು ಸೆರೆ ಹಿಡಿಯಲಾಗಿದೆ. ಇದರ ನಡುವೆ ಅಪ್ಪು ಅವರ ಕುತೂಹಲದ ಮಾತುಗಳು ಅಭಿಮಾನಿಗಳನ್ನು ಸೆಳೆಯುತ್ತಿವೆ.