ಇಂಗ್ಲೆಂಡ್ ಅಭಿಮಾನಿಗಳ ಅತಿರೇಕದ ವರ್ತನೆ ವಿರುದ್ಧ ಟೀಂ ಇಂಡಿಯಾ ಅಸಮಾಧಾನ

ಬೆಂಗಳೂರು, ಆಗಸ್ಟ್ 26, 2021 (www.justkannada.in): ಇಂಗ್ಲೆಂಡ್ ಅಭಿಮಾನಿಗಳ ಅತಿರೇಕದ ವರ್ತನೆ ವಿರುದ್ಧ ಟೀಂ ಇಂಡಿಯಾ ಆಟಗಾರರು ಬೇಸರ ವ್ಯಕ್ತಪಡಿಸಿದ್ದಾರೆ.

ಮೂರನೇ ಟೆಸ್ಟ್ ಪಂದ್ಯದ ವೇಳೆ ಪೀಲ್ಡಿಂಗ್ ನಲ್ಲಿದ್ದ ಮೊಹಮ್ಮದ್ ಸಿರಾಜ್ ಮೇಲೆ ಇಂಗ್ಲೆಂಡ್ ಅಭಿಮಾನಿಗಳು ಬಾಲ್ ಎಸೆದಿದ್ದರು.

ಈ ಅತಿರೇಕದ ವರ್ತನೆಯಿಂದ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ, ರಿಷಭ್ ಪಂತ್ ಇತರರು ಬೇಸರ ವ್ಯಕ್ತಪಡಿಸಿದ್ದಾರೆ.

ಪಂದ್ಯ ಮುಗಿದ ಬಳಿಕ ಸುದ್ದಿಗೋಷ್ಠಿಯಲ್ಲಿ ರಿಷಬ್ ಪಂತ್ ಅಸಮಾಧಾನ ವ್ಯಕ್ತಪಡಿಸಿದರು. ಏನಾದರೂ ಕೂಗಿ, ಏನಾದರೂ ಹೇಳಿ ಆದರೆ, ಪೀಲ್ಡಿಂಗ್ ನಲ್ಲಿರುವವರ ಮೇಲೆ ವಸ್ತುಗಳನ್ನು ಎಸೆಯಬೇಡಿ ಎಂದು ರಿಷಭ್ ಪಂತ್ ಹೇಳಿದ್ದಾರೆ.