Friday, October 9, 2026

BDA Apartments

Home Front Page SIR ಉದ್ದೇಶ ಬಡವರ ಮತ ಕಸಿಯುವುದಲ್ಲ: ಆಧಾರ ರಹಿತ ಆರೋಪ ಸಲ್ಲದು- ಕೋಟಾ ಶ್ರೀನಿವಾಸ್ ಪೂಜಾರಿ

SIR ಉದ್ದೇಶ ಬಡವರ ಮತ ಕಸಿಯುವುದಲ್ಲ: ಆಧಾರ ರಹಿತ ಆರೋಪ ಸಲ್ಲದು- ಕೋಟಾ ಶ್ರೀನಿವಾಸ್ ಪೂಜಾರಿ

ಬೆಂಗಳೂರು,ಮೇ,23,2026 (www.justkannada.in): ಎಸ್ ಐಆರ್ ಬಡವರ ಮತ ಕಸಿಯುವ ತಂತ್ರವೆಂದು ಕಾಂಗ್ರೆಸ್ ಹೇಳುತ್ತಿದೆ. ಎಸ್ ಐಆರ್ ಉದ್ದೇಶ ಬಡವರ ಮತ ಕಸಿಯುವುದಲ್ಲ ಎಂದು ಸಂಸದ ಕೋಟಾ ಶ್ರೀನಿವಾಸ್ ಪೂಜಾರಿ ಸ್ಪಷ್ಟಪಡಿಸಿದರು.

ಇಂದು ಮಾಧ್ಯಮಗಳೊಂದಿಗೆ ಮಾತನಾಡಿದ ಕೋಟಾ ಶ್ರೀನಿವಾಸ್ ಪೂಜಾರಿ,  ಎಸ್ ಐಆರ್ ಉದ್ದೇಶ ಬಡವರ ಮತ ಕಸಿಯುವುದಲ್ಲ.  ಎಸ್ ಐಆರ್ ಈ ದೇಶದ ಮತದಾರರಲ್ಲದವರನ್ನ ತೆಗೆಯುವುದಾಗಿದೆ ಆಧಾರ ರಹಿತವಾಗಿ ಕಾಂಗ್ರೆಸ್ ಆರೋಪ ಮಾಡುವುದು ಸರಿಯಲ್ಲ ಎಂದರು.

ಅಳಂದದ ಲಾಡ್ಲೆ ಮಾಕ್ ದರ್ಗಾ ಗಲಾಟೆ ಕೇಸ್ ವಾಪಸ್ ವಿಚಾರ ಕುರಿತು ಪ್ರತಿಕ್ರಿಯಿಸಿದ ಕೋಟಾ ಶ್ರೀನಿವಾಸ ಪೂಜಾರಿ,  ರಾಜ್ಯದ ಹಲವೆಡೆ ಇಂತಹ ಪ್ರಕರಣ ನಡೆದಿದೆ.  ಈ ಸರ್ಕಾರ ಕುಕ್ಕರ್, ಬಾಂಬರ್ ಗಲಭೆ ಮಾಡುವವರ ಪರ ಇದೆ.  ಕ್ರಿಮಿನಲ್ ಕೇಸ್ ಹಿಂಪಡೆಯುವುದರಿಂದ ಕುಮ್ಮಕ್ಕು ನೀಡಿದಂತಾಗುತ್ತೆ. ಕೇಂದ್ರ ಸರ್ಕಾರವನ್ನು ಟೀಕಿಸಿಲು ಸಿದ್ದರಾಮಯ್ಯ ಕಾರಣ ಹುಡುಕುತ್ತಿದ್ದಾರೆ ಎಂದು ಕುಟುಕಿದರು.SIR ಉದ್ದೇಶ ಬಡವರ ಮತ ಕಸಿಯುವುದಲ್ಲ: ಆಧಾರ ರಹಿತ ಆರೋಪ ಸಲ್ಲದು- ಕೋಟಾ ಶ್ರೀನಿವಾಸ...

Key words:  SIR, Baseless allegations, Congress, Kota Srinivas Poojary