35 ಮಿಲಿಯನ್ ವೀಕ್ಷಣೆ: ಮಹೇಶ್ ಬಾಬು ‘ಸರ್ಕಾರು ವಾರಿಪಾಟ’ ದಾಖಲೆ

ಬೆಂಗಳೂರು, ಆಗಸ್ಟ್ 26, 2021 (www.justkannada.in): ಟಾಲಿವುಡ್ ಪ್ರಿನ್ಸ್‌ ಮಹೇಶ್ ಬಾಬು ನಟನೆಯ ‘ಸರ್ಕಾರು ವಾರಿಪಾಟ’ ಚಿತ್ರದ ಟೀಸರ್  35 ಮಿಲಿಯನ್ ವೀಕ್ಷಣೆ ಪಡೆದಿದೆ.

ಆಗಸ್ಟ್ 9 ಮಹೇಶ್ ಬಾಬು ಹುಟ್ಟುಹಬ್ಬದ ಪ್ರಯುಕ್ತ  ‘ಸರ್ಕಾರು ವಾರಿಪಾಟ’ ಚಿತ್ರದ ಟೀಸರ್ ಬಿಡುಗಡೆ ಮಾಡಲಾಗಿತ್ತು.

ಭರ್ಜರಿ ರೆಸ್ಪಾನ್ಸ್ ಪಡೆದಿರುವ ಟೀಸರ್ ಗೆ 9 ಲಕ್ಷಕ್ಕೂ ಅಧಿಕ ಲೈಕ್ಸ್ ಗಳು ದೊರೆತಿದೆ. ಈ ಸಿನಿಮಾ ತೆಲುಗು ಭಾಷೆಯಲ್ಲಿ ಮಾತ್ರ ಬಿಡುಗಡೆಯಾಗುತ್ತಿದೆ.

ಮೈತ್ರಿ ಮೂವಿ ಮೇಕರ್ಸ್, 14 ರೀಲ್ ಪ್ಲಸ್ ಹಾಗೂ ಮಹೇಶ್ ಬಾಬು ಎಂಟರ್ ಟೇನ್ ಮೆಂಟ್ ಬ್ಯಾನರ್ ನಿಂದ ನಿರ್ಮಾಣ ಮಾಡಲಾಗುತ್ತಿದೆ.