ರಾಕುಲ್, ರಾಣಾ ದಗ್ಗುಬಾಟಿ, ರವಿತೇಜ ಸೇರಿ 10 ನಟರಿಗೆ ‘ಡ್ರಗ್’ ಸಂಕಷ್ಟ

ಬೆಂಗಳೂರು, ಆಗಸ್ಟ್ 26, 2021 (www.justkannada.in): ರಾಕುಲ್ ಪ್ರೀತ್ ಸಿಂಗ್, ರಾಣಾ ದಗ್ಗುಬಾಟಿ ಹಾಗೂ ಇನ್ನಿತರ 10 ನಟರನ್ನು ವಿಚಾರಣೆಗೆ ಹಾಜರಾಗುವಂತೆ ಜಾರಿ ನಿರ್ದೇಶನಾಲಯ ಸಮನ್ಸ್ ನೀಡಿದೆ.

ನಾಲ್ಕು ವರ್ಷದಷ್ಟು ಹಳೆದ ಡ್ರಗ್ಸ್‌ ಪ್ರಕರಣವೊಂದರಲ್ಲಿ ಜನಪ್ರಿಯ ನಟರಿಗೆ ಮತ್ತೆ ಸಂಕಷ್ಟ ಎದುರಾಗಿದೆ.

ರಾಕುಲ್ ಪ್ರೀತ್‌ಗೆ ಸೆಪ್ಟೆಂಬರ್‌ 6ರಂದು, ಬಾಹುಬಲಿ ನಟ ರಾಣಾ ದಗ್ಗುಬಾಟಿ ಸೆಪ್ಟೆಂಬರ್‌ 8ರಂದು, ತೆಲುಗಿನ ಇನ್ನಿತರ ನಟರಾದ ರವಿತೇಜ (ಸೆಪ್ಟೆಂಬರ್‌ 9) ಹಾಗೂ ನಿದೇರ್ಶಕ ಪೂರಿ ಜಗನ್ನಾಥ್‌ರನ್ನು ಸೆಪ್ಟೆಂಬರ್‌ 31ರಂದು ವಿಚಾರಣೆಗೆ ಹಾಜರಾಗುವಂತೆ ಜಾರಿ ನಿರ್ದೇಶನಾಲಯ ಸಮನ್ಸ್ ಕೊಟ್ಟಿದೆ.

ತೆಲಂಗಾಣ ಅಬಕಾರಿ ಹಾಗೂ ಮಾದಕ ವಸ್ತು ನಿಷೇಧ ಇಲಾಖೆಯು 2017ರಲ್ಲಿ 30 ಲಕ್ಷ ರೂ ಮೌಲ್ಯದ ಮಾದಕ ದ್ರವ್ಯ ವಶಕ್ಕೆ ಪಡೆದ ಬಳಿಕ 12 ಪ್ರಕರಣಗಳನ್ನು ದಾಖಲಿಸಿತ್ತು. 11 ಪ್ರಕರಣಗಳಲ್ಲಿ ಆರೋಪಪಟ್ಟಿ ದಾಖಲಿಸಲಾಗಿದೆ.