ಟಾಟಾ ಏಸ್ ಡಿಕ್ಕಿ: ದ್ವಿಚಕ್ರವಾಹನದಲ್ಲಿದ್ದ ಮಹಿಳೆ ಸಾವು.

ಬೆಂಗಳೂರು,ನವೆಂಬರ್,30,2022(www.justkannada.in): ಹಿಂಬದಿಯಿಂದ ಟಾಟಾ ಏಸ್ ಡಿಕ್ಕಿಯಾಗಿ ದ್ವಿಚಕ್ರವಾಹನದಲ್ಲಿದ್ದ ಮಹಿಳೆ ಸಾವನ್ನಪ್ಪಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಕೆ.ಆರ್ ಪುರಂ ಹ್ಯಾಂಗಿಂಗ್ ಬ್ರಿಡ್ಜ್ ಬಳಿ ಈ ಘಟನೆ ನಡೆದಿದೆ. ಶಾಲಿನಿ ಮೃತ ಮಹಿಳೆ.  ಶಾಲಿನಿ ಮತ್ತು ಅಲೆನ್ ಸ್ಮಿತ್ ಇಬ್ಬರು ಬೈಕ್ ನಲ್ಲಿ ತೆರಳುತ್ತಿದ್ದ ವೇಳೆ ಟಾಟಾ ಏಸ್ ಹಿಂಬದಿಯಿಂದ ಡಿಕ್ಕಿಹೊಡೆದಿದೆ. ಈ ವೇಳೆ ಶಾಲಿನಿ ಮತ್ತು ಅಲೆನ್ ಸ್ಮಿತ್ ಗಾಯಗೊಂಡಿದ್ದು ಇಬ್ಬರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಆದರೆ ಶಾಲಿನಿ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ.  ಅಪಘಾತ ನಂತರ ವಾಹನ ಬಿಟ್ಟು ಟಾಟಾ ಏಸ್ ಚಾಲಕ ಪರಾರಿಯಾಗಿದ್ದಾನೆ. ಈ ಕುರಿತು ಕೆ.ಆರ್ ಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Key words: Tata Ace –colision- two-wheeler- woman – died.