ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಂದ ರಾಷ್ಟ್ರೀಯ ಕ್ರೀಡಾ ಪ್ರಶಸ್ತಿ ಪ್ರದಾನ.

ನವದೆಹಲಿ,ನವೆಂಬರ್,30,2022(www.justkannada.in):  ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು  2021-22ನೇ ಸಾಲಿನ  ರಾಷ್ಟ್ರೀಯ ಕ್ರೀಡಾ ಪ್ರಶಸ್ತಿಯನ್ನ ಪ್ರದಾನ  ಮಾಡಿದರು.

ಕ್ರೀಡಾಕ್ಷೇತ್ರದಲ್ಲಿ ಸಾಧನೆ ಮೆರದವರಿಗೆ ಪ್ರಶಸ್ತಿ ಪ್ರದಾನ ಸಮಾರಂಭವನ್ನ ರಾಷ್ಟ್ರಪತಿ ಭವನದಲ್ಲಿ ಆಯೋಜಿಸಲಾಗಿತ್ತು. ಈ ವೇಳೆ ಕ್ರೀಡಾ ಸಾಧಕರಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಪ್ರಶಸ್ತಿ ಪ್ರದಾನ ಮಾಡಿದರು.

ಬ್ಯಾಡ್ಮಿಂಟನ್ ಆಟಗಾರರಾದ ಲಕ್ಷ್ಯ ಸೇನ್ , ಹೆಚ್ ಎಸ್ ಪ್ರಣಯ್ ಯುವ ಚೆಸ್ ಆಟಗಾರ ಆರ್ ಪ್ರಗ್ನಾನಂದ ಹಾಗೂ ಬಾಕ್ಸರ್ ನಿಖತ್ ಝರಿನ್ ಗೆ  ಅರ್ಜುನ ಪ್ರಶಸ್ತಿ ಪ್ರದಾನ ಮಾಡಲಾಯಿತು. ಕುಸ್ತಿ ತರಬೇತುದಾರ ರಾಜ್ ಸಿಂಗ್ ಗೆ ದ್ರೋಣಾಚಾರ್ಯ ಪ್ರಶಸ್ತಿ ಪ್ರದಾನ ಮಾಡಲಾಯಿತು.

Key words: National- Sports -Award – President- Draupadi Murmu