ಕನ್ನಡ ಸ್ಟಾರ್’ಗಳನ್ನು ಭೇಟಿ ಮಾಡುತ್ತಾ ಬೆಂಗಳೂರು ಸುತ್ತಿದ ತಮಿಳು ನಟ ಯೋಗಿ ಬಾಬು

ಬೆಂಗಳೂರು, ಆಗಸ್ಟ್ 20, 2020 (www.justkannada.in): ತಮಿಳಿನ ಖ್ಯಾತ ಹಾಸ್ಯ ನಟ ಯೋಗಿ ಬಾಬು ಕನ್ನಡದ ಸ್ಟಾರ್ ನಟರನ್ನು ಭೇಟಿ ಮಾಡಿದ್ದಾರೆ.

ನಟ ಯೋಗಿ ಬಾಬು ಬೆಂಗಳೂರಿನಲ್ಲಿ ಸುತ್ತುವುದರ ಜೊತೆಗೆ ಕನ್ನಡ ಸ್ಟಾರ್ ನಟರನ್ನು ಭೇಟಿ ಮಾಡುತ್ತಿದ್ದಾರೆ. ಈ ಹಿಂದೆ ನಟ ಪುನೀತ್ ರಾಜ್ ಕುಮಾರ್ ಹಾಗೂ ನಟ ವಿಜಯ್ ಅವರನ್ನು ಭೇಟಿ ಮಾಡಿದ್ದರು.

ಇದೀಗ ನಟ ಶಿವರಾಜ್ ಕುಮಾರ್ ಅವರನ್ನು ಭೇಟಿ ಮಾಡಿದ್ದಾರೆ. ಭಜರಂಗಿ 2 ಚಿತ್ರದ ಶೂಟಿಂಗ್ ಸ್ಥಳಕ್ಕೆ ಭೇಟಿ ಕೊಟ್ಟ ಯೋಗಿ ಬಾಬು ಅವರು ಶಿವರಾಜ್ ಕುಮಾರ್ ಅವರನ್ನು ಭೇಟಿ ಮಾಡಿ ಶಾಲು ಹೊದಿಸಿ ಸನ್ಮಾನ ಮಾಡಿದ್ದಾರೆ,
ಈ ಫೋಟೊಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.