ರಸ್ತೆಯಲ್ಲಿ ಎತ್ತಿನಗಾಡಿ ಸವಾರಿ ಮಾಡಿದ ದಚ್ಚು !

ಬೆಂಗಳೂರು, ಆಗಸ್ಟ್ 20, 2020 (www.justkannada.in): ಮಾಜಿ ಸಚಿವ ಹಾಗೂ ದರ್ಶನ್​ ಅವರ ಸ್ನೇಹಿತ ವಿನಯ್ ಕುಲಕರ್ಣಿ ಅವರ ತೋಟದಲ್ಲಿ ಎತ್ತಿನ ಸವಾರಿ ಮಾಡಿದ ದರ್ಶನ್​ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.

ಹೌದು. ನಟ ದರ್ಶನ್​ ಇತ್ತೀಚಿಗೆ ತಮ್ಮ ಸ್ನೇಹಿತ ವಿನಯ್​ ಕುಲಕರ್ಣಿ ಅವರ ಮನೆಗೆ ಭೇಟಿ ನೀಡಿದ್ದರು. ಜೊತೆಗೆ ಅವರ ತೋಟದಲ್ಲಿದ್ದ ಎತ್ತಿನ ಬಂಡಿ ಏರಿ ಅಲ್ಲಿನ ರಸ್ತೆಗಳಲ್ಲಿ ಅಡ್ಡಾಡಿದ್ದರು.

ವಿನಯ್​ ಕುಲಕರ್ಣಿ ಅವರ ಮನೆಯಿಂದ ಬಂದ ನಂತರ, ದರ್ಶನ್​ ತಮ್ಮ ತೋಟಕ್ಕೆ ಎರಡು ಎತ್ತುಗಳನ್ನು ತರಿಸಿದ್ದಾರಂತೆ. ಅಂದಹಾಗೆ ಈಗಾಗಲೇ ತೋಟದ ಮನೆಯಲ್ಲಿ ಹಸುಗಳು, ಕುದುರೆ, ನಾಯಿ, ಪಕ್ಷಿ ಹೀಗೆ ಹಲಾವರು ಜೀವಿಗಳನ್ನು ಸಾಕಿಕೊಂಡಿದ್ದಾರೆ ದರ್ಶನ್.