Sunday, August 23, 2026

BDA Apartments

Home Front Page ಮುಂದುವರೆದ ಮಾಜಿ ಸಿಎಂಗಳ ಟಾಕ್ ವಾರ್ : ಹೆಚ್.ಡಿಕೆಗೆ  ಮಾಜಿ ಸಿಎಂ ಸಿದ್ಧರಾಮಯ್ಯ ಮತ್ತೆ ಟಾಂಗ್…

ಮುಂದುವರೆದ ಮಾಜಿ ಸಿಎಂಗಳ ಟಾಕ್ ವಾರ್ : ಹೆಚ್.ಡಿಕೆಗೆ  ಮಾಜಿ ಸಿಎಂ ಸಿದ್ಧರಾಮಯ್ಯ ಮತ್ತೆ ಟಾಂಗ್…

ಬೆಂಗಳೂರು,ಡಿಸೆಂಬರ್,7,2020(www.justkannada.in):  ಮೈತ್ರಿ ಸರ್ಕಾರ ಪತನ ಸಂಬಂಧ  ಮಾಜಿ ಸಿಎಂಗಳ ಟಾಕ್ ವಾರ್ ಮುಂದುವರೆದಿದ್ದು, ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರದಿಂದ ನನ್ನ ಗೌರವ ಹಾಳಾಯ್ತು ಎಂಬ ಮಾಜಿ ಸಿಎಂ ಹೆಚ್,ಡಿ ಕುಮಾರಸ್ವಾಮಿ ಹೇಳಿಕೆಗೆ ಮಾಜಿ ಸಿಎಂ ಸಿದ್ಧರಾಮಯ್ಯ ಟ್ವಿಟ್ಟರ್ ನಲ್ಲಿ ಮತ್ತೆ ಟಾಂಗ್ ನೀಡಿದ್ದಾರೆ.logo-justkannada-mysore

ಟ್ವಟ್ಟರ್ ನಲ್ಲಿ ಟ್ವೀಟ್ ಮಾಡಿರುವ ಸಿದ್ಧರಾಮಯ್ಯ, ಕುಮಾರಸ್ವಾಮಿಗೆ ಒಳ್ಳೆಯ ಇಮೇಜ್ ಇದ್ದಿದ್ದರೆ ಇನ್ನು ಹೆಚ್ಚಿನ ಸ್ಥಾನಗಳನ್ನು ಗೆಲ್ಲುತ್ತಿತ್ತು ಎಂದು ಟಾಂಗ್ ನೀಡಿದ್ದಾರೆ. 2004 ರಲ್ಲಿ ನಾನು ಜೆಡಿಎಸ್ ನಲ್ಲಿದ್ದಾಗ ಜೆಡಿಎಸ್ 59 ಸ್ಥಾನ ಗೆದ್ದಿತ್ತು. ನನ್ನನ್ನು ಪಕ್ಷದಿಂದ ವಜಾಗೊಳಿಸಿದ ನಂತರ 28 ಸ್ಥಾನ, 2013 ರ ಚುನಾವಣೆಯಲ್ಲಿ 40 ಸ್ಥಾನ, ಕಳೆದ ಚುನಾವಣೆಯಲ್ಲಿ ಜೆಡಿಎಸ್ 37 ಸ್ಥಾನ ಗೆದ್ದಿತ್ತು ಕುಮಾರಸ್ವಾಮಿ ಜನರ ಬಳಿ ಗೌರವ ಉಳಿಸಿಕೊಂಡಿದ್ದರೆ 59 ರಿಂದ 28 ಸ್ಥಾನಕ್ಕೆ ಬರುತ್ತಿತ್ತೇ ಎಂದು ಹೆಚ್.ಡಿ ಕುಮಾರಸ್ವಾಮಿಗೆ ಪ್ರಶ್ನಿಸಿದ್ದಾರೆ.Talk War –Continued- Former CM Siddaramaiah –jds- HD kumaraswamy

ಜೆಡಿಎಸ್ ಬಿಜೆಪಿ ಬಿ ಟೀಂ ಎನ್ನುವುದು ಇದಕ್ಕೆ…

ಜೆಡಿಎಸ್ ನವರು ಬಿಜೆಪಿ ಬಗ್ಗೆ ಸದಾ ಮೃಧು ಧೋರಣೆ ಹೊಂದಿದ್ದಾರೆ. ಅದಕ್ಕೆ ಅದನ್ನು ಬಿಜೆಪಿಯ ಬಿ ಟೀಮ್ ಎನ್ನುವುದು. ಹಿಂದಿನ ಸುತ್ತಿನ ಚುನಾವಣೆಯಲ್ಲಿ ಅತಂತ್ರ ಫಲಿತಾಂಶ ಬಂದಾಗ ಹೆಚ್.ಡಿ ಕುಮಾರಸ್ವಾಮಿಗೆ  ಸರ್ಕಾರ ರಚನೆ ಮಾಡುವಂತೆ ಆಹ್ವಾನ ನೀಡಿ, ಮೊದಲ ಸುತ್ತಿನ ಮಾತುಕತೆ ನಡೆಸಿದ್ದು ಕಾಂಗ್ರೆಸ್ ಹೈಕಮಾಂಡ್, ನಾನಲ್ಲ. 37 ಸ್ಥಾನ ಗೆದ್ದವರಿಗೆ ಮುಖ್ಯಮಂತ್ರಿ ಹುದ್ದೆ ನೀಡಿದ್ದರು. ಇದರಲ್ಲಿ ಟ್ರ್ಯಾಪಿಂಗ್ ಎಲ್ಲಿಂದ ಬಂತು ಎಂದು ಟ್ವಟ್ಟರ್ ನಲ್ಲಿ ಸಿದ್ಧರಾಮಯ್ಯ ತಿರುಗೇಟು ನೀಡಿದ್ದಾರೆ.

Key words: Talk War –Continued- Former CM Siddaramaiah –jds- HD kumaraswamy