Tuesday, August 18, 2026

BDA Apartments

Home Cinema ಕರೆಂಟ್ ಬಿಲ್ ನೋಡಿ ಗಾಬರಿಯಾದ ತಾಪ್ಸಿ !

ಕರೆಂಟ್ ಬಿಲ್ ನೋಡಿ ಗಾಬರಿಯಾದ ತಾಪ್ಸಿ !

ಬೆಂಗಳೂರು, ಜೂನ್ 30, 2020 (www.justkannada.in): ಬಾಲಿವುಡ್ ನಟಿ ತಾಪ್ಸಿ ಪನ್ನು ಒಂದು ತಿಂಗಳ ಕರೆಂಟ್ ಬಿಲ್ ನೋಡಿ ಶಾಕ್ ಆಗಿದ್ದಾರೆ.

ತಾಪ್ಸಿ ಮನೆಯ ಕರೆಂಟ್ ಬಿಲ್ ಒಂದು ತಿಂಗಳಿಗೆ ಬರೋಬ್ಬರಿ 36 ಸಾವಿರ ರೂ. ಬಂದಿದ್ದು, ಇದನ್ನು ನೋಡಿ ಗಾಬರಿ ವ್ಯಕ್ತಪಡಿಸಿದ್ದಾರೆ. ತಾಪ್ಸಿ ಪನ್ನು ಅವರ ಇನ್ನೊಂದು ಮನೆಯ ಕರೆಂಟ್ ಬಿಲ್ ಸಹ ಜಾಸ್ತಿ ಬಂದಿದೆಯಂತೆ!

ಸದ್ಯಕ್ಕೆ ಅಲ್ಲಿ ಯಾರೂ ವಾಸಿಸುತ್ತಿಲ್ಲ. ವಾರಕ್ಕೊಮ್ಮೆ ನಾನೇ ಅಲ್ಲಿಗೆ ಹೋಗಿ ಕ್ಲೀನ್ ಮಾಡಿ ಬರುತ್ತೇನೆ. ಅಷ್ಟಕ್ಕೆ ಇಷ್ಟು ಬಿಲ್ ಬಂದಿದೆ. ಇನ್ನು ನನಗೆ ಗೊತ್ತಿಲ್ಲ ಅಲ್ಲಿ ಯಾರಾದರೂ ವಾಸಿಸುತ್ತಿದ್ದಾರಾ ಎಂಬ ಅನುಮಾನ ಮೂಡುತ್ತಿದೆ ಎಂದಿದ್ದಾರೆ.