Monday, August 10, 2026

BDA Apartments

Home Crime ತಿ.ನರಸೀಪುರದ ಬೆನಕನಹಳ್ಳಿ ಪಟ್ಟದ ಮಠದ ಮಹದೇವಸ್ಚಾಮಿ ಸ್ವಾಮೀಜಿ ಅನುಮಾನಾಸ್ಪದ ಸಾವು

ತಿ.ನರಸೀಪುರದ ಬೆನಕನಹಳ್ಳಿ ಪಟ್ಟದ ಮಠದ ಮಹದೇವಸ್ಚಾಮಿ ಸ್ವಾಮೀಜಿ ಅನುಮಾನಾಸ್ಪದ ಸಾವು

ಮೈಸೂರು, ಮಾರ್ಚ್ 7, 2020 (www.juskannada.in): ಮೈಸೂರಿನಲ್ಲಿ ಸ್ವಾಮೀಜಿಯೊಬ್ಬರು ಮೃತಪಟ್ಟಿದ್ದು, ಇದರಿಂದ ಹಲವಾರು ಅನುಮಾನಗಳು ಉದ್ಭವಿಸಿವೆ.

ತಿ.ನರಸೀಪುರದ ಬೆನಕನಹಳ್ಳಿ ಪಟ್ಟದ ಮಠದ ಮಹದೇವಸ್ಚಾಮಿ ಸ್ವಾಮೀಜಿ ನಿಧನರಾಗಿದ್ದಾರೆ. ಆದರೆ ಇದು ಹೃದಯಾಘಾತವಲ್ಲ ಆತ್ಮಹತ್ಯೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ಗ್ರಾಮಸ್ಥರ ಆರೋಪದ ಹಿನ್ನಲೆಯಲ್ಲಿ‌ ಮರಣೋತ್ತರ ಪರೀಕ್ಷೆಗೆ ನಿರ್ಧಾರ ಮಾಡಲಾಗಿದೆ. ಮರಣೋತ್ತರ ಪರೀಕ್ಷೆ ನಂತರ ಸ್ವಾಮೀಜಿ ಸಾವಿಗೆ ಕಾರಣ ತಿಳಿಯಲಿದೆ. ಈ ಹಿನ್ನಲೆಯಲ್ಲಿ ಸ್ವಾಮೀಜಿ ಮೃತದೇಹದ ಮರಣೋತ್ತರ ಪರೀಕ್ಷೆಗೆ ನಿರ್ಧರಿಸಲಾಗಿದೆ. ಸ್ವಾಮೀಜಿ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದ್ದು, ಸ್ಥಳದಲ್ಲಿ ಗೊಂದಲದ ವಾತಾವರಣ ನಿರ್ಮಾಣವಾಗಿದೆ.