Saturday, September 26, 2026

BDA Apartments

Home Front Page ಆ.19 ರಂದು ಪತ್ರಕರ್ತರಿಗೆ ‘AI’ ತಂತ್ರಜ್ಞಾನ ಮತ್ತು ಸತ್ಯಾಸತ್ಯತೆ ಪರಿಶೀಲನೆ ಕುರಿತು ಆನ್‌ ಲೈನ್ ತರಬೇತಿ

ಆ.19 ರಂದು ಪತ್ರಕರ್ತರಿಗೆ ‘AI’ ತಂತ್ರಜ್ಞಾನ ಮತ್ತು ಸತ್ಯಾಸತ್ಯತೆ ಪರಿಶೀಲನೆ ಕುರಿತು ಆನ್‌ ಲೈನ್ ತರಬೇತಿ

ಬೆಂಗಳೂರು,ಆಗಸ್ಟ್,10,2026 (www.justkannada.in): ಕರ್ನಾಟಕ ಮಾಧ್ಯಮ ಅಕಾಡೆಮಿ ಹಾಗೂ ನವದೆಹಲಿಯ ಡೇಟಾಲೀಡ್ಸ್  ಸಂಸ್ಥೆಯ ಜಂಟಿ ಸಹಯೋಗದೊಂದಿಗೆ ಪತ್ರಕರ್ತರು, ಸಂಪಾದಕರು ಮತ್ತು ಸುದ್ದಿ ಸಂಸ್ಥೆಗಳ ಸಿಬ್ಬಂದಿಗಾಗಿ ವಿಶೇಷ ಆನ್‌ಲೈನ್ ತರಬೇತಿ ಕಾರ್ಯಾಗಾರವನ್ನು ಆಯೋಜಿಸಲಾಗಿದೆ.

ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ (AI) ತಂತ್ರಜ್ಞಾನದ ಸದುಪಯೋಗ, ಎಐ-ಸೃಷ್ಟಿತ ವಿಷಯಗಳ ಸತ್ಯಾಸತ್ಯತೆ ಪರಿಶೀಲನೆ (Verification), ವಾಟರ್‌ಮಾರ್ಕಿಂಗ್ ಹಾಗೂ ಅವುಗಳ ಮೂಲ ಪತ್ತೆಹಚ್ಚುವ ಪ್ರಾಯೋಗಿಕ ಕೌಶಲ್ಯಗಳನ್ನು ಬೆಳೆಸುವುದು ಈ ಕಾರ್ಯಕ್ರಮದ ಪ್ರಮುಖ ಉದ್ದೇಶವಾಗಿದೆ.

​ಕಾರ್ಯಾಗಾರದ ಪ್ರಮುಖ ಮುಖ್ಯಾಂಶಗಳು

​ಪ್ರಾಯೋಗಿಕ ತರಬೇತಿ: ಎಐ ಪರಿಕರಗಳು ಮತ್ತು ಸತ್ಯಾಸತ್ಯತೆ ಪರಿಶೀಲನೆಯ ಕುರಿತು ನೇರ ತರಬೇತಿ.

ಸಂಪಾದಕೀಯ ಮಾರ್ಗದರ್ಶನ: ಸುದ್ದಿ ಮಾಧ್ಯಮದ ದಿನನಿತ್ಯದ ಸಂಪಾದಕೀಯ ಪ್ರಕ್ರಿಯೆಗಳಲ್ಲಿ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುವ ಬಗ್ಗೆ ಪ್ರಾಯೋಗಿಕ ಸಲಹೆಗಳು.

ಎಐ ಪರಿಕರಗಳ ಬಳಕೆ: ಭಾಗವಹಿಸುವ ಪತ್ರಕರ್ತರಿಗೆ ಎಐ ಪರಿಕರಗಳನ್ನು ಸ್ವತಃ ಬಳಸಲು ಅವಕಾಶ.

ನಿರಂತರ ಬೆಂಬಲ: ತಂತ್ರಜ್ಞಾನ ಬದಲಾದಂತೆ ಪತ್ರಕರ್ತರಿಗೆ ಅಗತ್ಯವಿರುವ ನಿರಂತರ ಬೆಂಬಲ ಮತ್ತು ಪುನಶ್ಚೇತನ (Refresher) ಗೋಷ್ಠಿಗಳ ಸೌಲಭ್ಯ.justkannada AI

ಕಾರ್ಯಾಗಾರವನ್ನು 2026 ನೇ ಆಗಸ್ಟ್ 19 ರಂದು  ಬೆಳಿಗ್ಗೆ 11:00 ರಿಂದ ಮಧ್ಯಾಹ್ನ 12:00 ರವರೆಗೆ ಕನ್ನಡ ಮತ್ತು ಇಂಗ್ಲಿಷ್ ಭಾಷೆಯಲ್ಲಿ ಹಮ್ಮಿಕೊಳ್ಳಲಾಗಿದೆ.

ಆಸಕ್ತ ಪತ್ರಕರ್ತರು ಮತ್ತು ಸುದ್ದಿ ಸಂಸ್ಥೆಯ ಸಿಬ್ಬಂದಿ ಆನ್ ಲೈನ್ ಲಿಂಕ್ https://forms.gle/WFTDmJJkhbcagMEd8 ಮೂಲಕ ಆಗಸ್ಟ್ 16ರ ಒಳಗಾಗಿ ನೋಂದಾಯಿಸಿಕೊಳ್ಳುವುದು.2026 www justkannada jk02_new jk02 new

Key words: Online training, journalists, AI technology, Karnataka Media Academy