ಸುಶಾಂತ್ ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್ ಮೇಲೆ ಟ್ವಿಸ್ಟ್ !

ಮುಂಬೈ, 06, 2020 (www.justkannada.in): ಸುಶಾಂತ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹೊಸ ಹೊಸ ತಿರುವುಗಳು ಸಿಗುತ್ತಿವೆ. ರಿಯಾ ಸುಶಾಂತ್ ಮೊಬೈಲ್ ನಂಬರ್ ಬ್ಲಾಕ್ ಮಾಡಿದ್ದ ವಿಷಯ ಬೆಳಕಿಗೆ ಬಂದಿದೆ.

ರಿಯಾ ಸಂಪೂರ್ಣವಾಗಿ ಸುಶಾಂತ್‌ರನ್ನು ದೂರ ಮಾಡಲು ನಿಶ್ಚಯಿಸಿ, ಫೋನ್ ನಂಬರ್‌ ಅನ್ನು ಬ್ಲಾಕ್‌ ಮಾಡಿರಬಹುದು ಎಂಬ ಸಂಶಯ ವ್ಯಕ್ತವಾಗಿದೆ.

ಜೂನ್ 8ರಂದು ಸುಶಾಂತ್ ಸಿಂಗ್‌ ಮಾಜಿ ಮ್ಯಾನೇಜರ್‌ ದಿಶಾ ಸಾಲಿಯಾನ್‌ ಅನುಮಾನಾಸ್ಪಾದವಾಗಿ ಸಾವನ್ನಪ್ಪಿದ ಬಳಿಕ ಸುಶಾಂತ್ ಫ್ಲ್ಯಾಟ್‌ನಿಂದ ನಟಿ ರಿಯಾ ಹೊರನಡೆಯುತ್ತಾರೆ.

ಹಲವು ಸಮಯದಿಂದ ಸುಶಾಂತ್‌ ಜೊತೆಗಿದ್ದ ನಟಿ ಏಕಾಏಕಿ ಫ್ಲ್ಯಾಟ್‌ ಖಾಲಿ ಮಾಡಿದ್ಯಾಕೆ.? ಅನ್ನೊ ಪ್ರಶ್ನೆ ಅನುಮಾನಕ್ಕೆ ಕಾರಣವಾಗಿದೆ. ಮುಂಬೈ ಪೊಲೀಸರ ಜೊತೆಗೆ ಪಾಟ್ನಾ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.