ಪ್ರವಾಹ ಪರಿಸ್ಥಿತಿ:  ಗರ್ಭಿಣಿಯನ್ನು ಆಸ್ಪತ್ರೆಗೆ ದಾಖಲಿಸಲು ಪರದಾಟ….

ಕೊಡಗು,ಆ,7,2020(www.justkannada.in):  ರಾಜ್ಯದಲ್ಲಿ ಕಳೆದ ಮೂರ್ನಾಲ್ಕು ದಿನಗಳಿಂದ ಭಾರಿ ಮಳೆಯಾಗುತ್ತಿದ್ದು ಹಲವು ಜಿಲ್ಲೆಗಳು ನೆರೆ ಭೀತಿ ಎದುರಿಸುತ್ತಿವೆ. ಈ ಮಧ್ಯೆ ಕೊಡಗು ಜಿಲ್ಲೆಯಲ್ಲೂ ವರುಣನ ಅಬ್ಬರ ಜೋರಾಗಿದ್ದು, ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ. jk-logo-justkannada-logo

ಭಾರಿ ಮಳೆಯಿಂದಾಗಿ  ರಸ್ತೆ ಸಂಪರ್ಕ ಕಡಿತಗೊಂಡ ಹಿನ್ನೆಲೆ ಗರ್ಭಿಣಿಯನ್ನು ಆಸ್ಪತ್ರೆಗೆ ದಾಖಲಿಸಲು ಕುಟುಂಬಸ್ಥರು ಪರದಾಡಿದ ಘಟನೆ ಮಡಿಕೇರಿ ತಾಲ್ಲೂಕಿನ ಅಯ್ಯಂಗೇರಿ ಗ್ರಾಮದಲ್ಲಿ  ನಡೆದಿದೆ. ಅಯ್ಯಂಗೇರಿ ಗ್ರಾಮದ ಮಮತಾ ಈಶ್ವರ ಎಂಬ  ಗರ್ಭಿಣಿ ಮಹಿಳೆಯನ್ನ ಆಸ್ಪತ್ರೆಗೆ ದಾಖಲಿಸಲು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿತ್ತು.

ಈ ಮಧ್ಯೆ  ಸ್ಥಳೀಯ ಕುಯ್ಯಮುಡಿ ಕುಟುಂಬಸ್ಥರು ಎನ್ ಡಿಆರ್ ಎಫ್ ತಂಡದ ಸಹಕಾರದೊಂದಿಗೆ ಗರ್ಭಿಣಿ ಮಹಿಳೆ ಮಮತಾ ಈಶ್ವರ ಅವರನ್ನ ಸುರಕ್ಷಿತವಾಗಿ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಈ ಸೇವಾ ಕಾರ್ಯದಲ್ಲಿ ಲವ, ರಂಜು, ಶಂಬು, ಕಿಶು, ಧನು ಮತ್ತಿತರರು ಭಾಗಿಯಾಗಿದ್ದರು.kodagu-heavy-rain-pregnant-women-hospital

ಕೊಡಗು ಜಿಲ್ಲೆಯಲ್ಲಿ ಭಾರಿ ಮಳೆಯಾಗುತ್ತಿದ್ದು ಜನ ಜೀವನ ಅಸ್ತವ್ಯಸ್ಥವಾಗಿದೆ. ನಿನ್ನೆ ಮನೆಗಳ ಮೇಲೆ ಬ್ರಹ್ಮಗಿರಿ ಬೆಟ್ಟ ಕುಸಿದು ಮನೆಯಲ್ಲಿದ್ದ ಅರ್ಚಕರ ಕುಟುಂಬ  ಅವೇಷಗಳಡಿ ಸಿಲುಕಿರುವ ಶಂಕೆ ವ್ಯಕ್ತವಾಗಿದೆ.

Key words: kodagu- Heavy rain-Pregnant women-hospital