Saturday, August 22, 2026

BDA Apartments

Home Crime ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಾಂಬ್ ಇಟ್ಟಿದ್ದ ಆರೋಪಿ ಪೊಲೀಸರ ಎದುರು ಶರಣು….

ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಾಂಬ್ ಇಟ್ಟಿದ್ದ ಆರೋಪಿ ಪೊಲೀಸರ ಎದುರು ಶರಣು….

ಮಂಗಳೂರು,ಜ,22,2020(www.justkannada.in): ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಾಂಬ್ ಇಟ್ಟಿದ್ದ ಆರೋಪಿ ಇದೀಗ ಪೊಲೀಸರ ಎದುರು ಶರಣಾಗಿದ್ದಾನೆ.

ಉಡುಪಿಯ ಮಣಿಪಾಲ ನಿವಾಸಿ ಆದಿತ್ಯ ರಾವ್ (40) ಶರಣಾದ ಆರೋಪಿ. ಈತ ಇಂಜಿನಿಯರಿಂಗ್ ಪದವೀಧರ. ಮಾರು ವೇಷದಲ್ಲಿ ಲಾರಿಯಲ್ಲಿ ಬಂದು ಬೆಂಗಳೂರು ಪೊಲೀಸರ ಎದುರು ಶರಣಾಗಿದ್ದಾನೆ. ಅಲ್ಲದೆ , ಏರ್ ಪೋರ್ಟ್ ನಲ್ಲಿ ಬಾಂಬ್ ಇಟ್ಟಿದ್ದು ನಾನೇ ಎಂದು ಆರೋಪಿ ಆದಿತ್ಯರಾವ್ ತಪ್ಪೊಪ್ಪಿಕೊಂಡಿದ್ದಾನೆ.

 ಸದ್ಯ ಪೊಲೀಸರು ಆರೋಪಿಯನ್ನು ಮೆಡಿಕಲ್ ಟೆಸ್ಟ್ ಗಾಗಿ ಬೆಂಗಳೂರಿನ ಸೆಂಟ್ ಮಾರ್ಥಸ್ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿದ್ದಾರೆ. ಇನ್ನು ಮಂಗಳೂರು ಏರ್ ಪೋರ್ಟ್ ನಲ್ಲಿ ಬಾಂಬ್ ಇಟ್ಟಿದ್ದ ಆರೋಪಿಗಾಗಿ ಪೊಲೀಸರು ಮಂಗಳೂರು, ಉಡುಪಿ, ಮೈಸೂರು, ಹಾಸನ ಸೇರಿ 30ಕ್ಕೂ ಹೆಚ್ಚು ಸ್ಥಳಗಳಲ್ಲಿ ಶೋಧ ನಡೆಸಿದ್ದರು.

Key words: Surrender –accused- bomb- Mangalore airport- police