ಕುಮಾರಸ್ವಾಮಿಯದ್ದು ಬೇಜವಾಬ್ದಾರಿ, ದೇಶದ್ರೋಹದ ಹೇಳಿಕೆ- ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಕಿಡಿ

ಹುಬ್ಬಳ್ಳಿ,ಜ,21,2020(www.justkannada.in): ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಾಂಬ್ ಪತ್ತೆ ಅಣಕು ಪ್ರದರ್ಶನದಂತಿತ್ತು  ಎಂದು ಟೀಕಿಸಿದ ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ವಿರುದ್ದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಕಿಡಿಕಾರಿದ್ದಾರೆ.

ಇದೊಂದು ನಾಲಾಯಕ್ ತನದ ಪರಾಮಾವಧಿ. ಯಾರು ಬಾಂಬ್ ಇಟ್ಟಿದ್ದರೇಂದು ಹೆಚ್ಡಿಕೆಗೆ ಗೊತ್ತಿದ್ದರೇ ಅವರ ವಿರುದ್ದ ಪ್ರಕರಣ ದಾಖಲಿಸಲಿ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ  ವಾಗ್ದಾಳಿ ನಡೆಸಿದ್ದಾರೆ.

ಹೆಚ್.ಡಿಕೆ ಟೀಕೆ ಬಗ್ಗೆ ಹುಬ್ಬಳ್ಳಿಯಲ್ಲಿ ಮಾತನಾಡಿದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಮಂಗಳೂರು ಏರ್ ಪೋರ್ಟ್ ನಲ್ಲಿ ಬಾಂಬ್ ಪತ್ತೆ  ಆತಂಕಕಾರಿ ವಿಷಯ.  ದೇಶದಲ್ಲಿ ಅಭದ್ರತೆ ಸೃಷ್ಠಿಸಲು ಹುನ್ನಾರ ನಡೆದಿದೆ.  ಮಂಗಳೂರು ಹಿಂಸಾಚಾರದಲ್ಲಿ ಭಾಗಿಯಾಗಿದ್ದವರ ಪ್ರೇರಣೆಯಿಂದ  ಜೀವಂತ ಬಾಂಬ್ ಇಟ್ಟು ಹೋಗಿರುವ ಸಾಧ್ಯತೆ ಇದೆ.   ಪ್ರಕರಣದ ಬಗ್ಗೆ ತನಿಖೆಯಾಗಿ ತಪ್ಪಿತಸ್ಥರನ್ನ ಬಂಧಿಸಬೇಕು. ಇನ್ನು  ಕುಮಾರಸ್ವಾಮಿಯದ್ದು ಬೇಜವಾಬ್ದಾರಿ  ಹೇಳಿಕೆ ದೇಶದ್ರೋಹ ಹೇಳಿಕೆ ಎಂದು ಟೀಕಿಸಿದರು.

Key words: hd Kumaraswamy – irresponsible- statement – Union Minister -Prahlad Joshi