ಸ್ಪೀಕರ್ ರಮೇಶ್ ಕುಮಾರ್ ಅರ್ಜಿ ತುರ್ತು ವಿಚಾರಣೆಗೆ ಸುಪ್ರೀಂಕೋರ್ಟ್ ನಕಾರ…

ಬೆಂಗಳೂರು,ಜು,11,2019(www.justkannada.in):  ಅತೃಪ್ತ ಶಾಸಕರ ರಾಜಿನಾಮೆ ವಿಚಾರವನ್ನು ತ್ವರಿತ ಗತಿಯಲ್ಲಿ ಇತ್ಯಾರ್ಥ ಮಾಡಲು ಆಗಲ್ಲ ಎಂದು ಸ್ಪೀಕರ್ ರಮೇಶ್ ಕುಮಾರ್ ಸುಪ್ರೀಂಕೋರ್ಟ್ ಗೆ ತಿಳಿಸಿದ್ದಾರೆ.

ಈ ಸಂಬಂಧ  ಸ್ಪೀಕರ್ ರಮೇಶ್ ಕುಮಾರ್ ಸುಪ್ರೀಂ ಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದಾರೆ. ತನ್ನ ಅರ್ಜಿಯನ್ನು ತುರ್ತಾಗಿ ವಿಚಾರಣೆ ನಡೆಸುವಂತೆ ಸ್ಪೀಕರ್ ರಮೇಶ್ ಕುಮಾರ್  ಮನವಿ ಮಾಡಿದ್ದಾರೆ. ಶಾಸಕರು ಸ್ವ- ಇಚ್ಛೆಯಿಂದ ರಾಜೀನಾಮೆ ನೀಡಿದ್ದಾರಾ .. ? ಇಲ್ಲವೊ ? ಎನ್ನುವ ಬಗ್ಗೆ ವಿಚಾರಣೆ ನಡೆಸಬೇಕಿದೆ. ಈ ಹಿನ್ನೆಲೆ ಶಾಸಕರ ರಾಜೀನಾಮೆಯ ಬಗ್ಗೆ ಇಂದು ಸಂಜೆ ವೇಳೆಗೆ ಇತ್ಯಾರ್ಥ ಮಾಡಲು ಸಾಧ್ಯವಿಲ್ಲ ಎಂದು ಸುಪ್ರೀಂಕೋರ್ಟ್ ಗೆ ತಿಳಿಸಿದ್ದಾರೆ.

ಈ ನಡುವೆ ಸ್ಪೀಕರ್ ಅವರ ಅರ್ಜಿಯನ್ನ ತುರ್ತಾಗಿ ವಿಚಾರಣೆ ನಡೆಸಲು ಸುಪ್ರೀಂಕೋರ್ಟ್ ನಿರಾಕರಿಸಿದೆ. ವಿಚಾರಣೆಯನ್ನ ನಾಳೆ ನಡೆಸುವುದಾಗಿ ಸುಪ್ರೀಂಕೋರ್ಟ್ ತಿಳಿಸಿದೆ.

Key words: Supreme Court – hear -Speaker Ramesh Kumar’s- petition