ಪಕ್ಷೇತರ ಶಾಸಕರನ್ನ ಭೇಟಿ ಮಾಡಿ ಬಿಜೆಪಿ ಬೆಂಬಲಿಸುವಂತೆ ಮನವಿ ಮಾಡಿದ್ದೇನೆ- ಅತೃಪ್ತ ಶಾಸಕರ ಭೇಟಿ ಕುರಿತು ಆರ್. ಅಶೋಕ್ ಏನಂದ್ರು..?

ಬೆಂಗಳೂರು,ಜು,11,2019(www.justkannada.in):  ಮುಂಬೈನಲ್ಲಿ ಪಕ್ಷೇತರ ಶಾಸಕರನ್ನ ಭೇಟಿ ಮಾಡಿದ್ದೇನೆ. ಬಿಜೆಪಿಗೆ ಬೆಂಬಲಿಸುವಂತೆ ಮನವಿ ಮಾಡಿದ್ದೇನೆ.  ಆದರೆ ಬೇರೆ ಯಾವ ಶಾಸಕರನ್ನೂ ಭೇಟಿ ಮಾಡಿಲ್ಲ ಎಂದು ಬಿಜೆಪಿ ಶಾಸಕ ಆರ್.ಅಶೋಕ್ ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ ಇಂದು ಮಾತನಾಡಿದ ಶಾಸಕ ಆರ್. ಅಶೋಕ್, ನಾನು ಬೆಂಗಳೂರಿನ ಅತೃಪ್ತ ಶಾಸಕರನ್ನು ಭೇಟಿ ಮಾಡಿಯೇ ಇಲ್ಲ. ನಾನು ನೋಡಿಯೂ ಇಲ್ಲ. ಮಾತಾನಾಡಿಯೂ ಇಲ್ಲ ಅವರ್ಯಾರು ಅಂತಾ ನನಗೆ ಗೊತ್ತಿಲ್ಲ. ಅತೃಪ್ತ ಶಾಸಕರಿಗೂ ನಮಗೂ ಸಂಬಂಧವಿಲ್ಲ ಎಂದು ತಿಳಿಸಿದರು.

ಒಂದು ವರ್ಷದಿಂದ ಶಾಸಕರನ್ನ ಡಿಕೆಶಿ ಚೆನ್ನಾಗಿ ನೋಡಿಕೊಳ್ಳಬೇಕಿತ್ತು.   ಅತೃಪ್ತ ಶಾಸಕರು ಶಾಸಕ ಸ್ಥಾನಕ್ಕೆ ಮಾತ್ರ ರಾಜೀನಾಮೆ ನೀಡಿದ್ದಾರೆ. ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಿಲ್ಲ. ಅವರು  ರಾಜೀನಾಮೆಗೆ ಕಾರಣವನ್ನ ತಿಳಿಸಿದ್ದಾರೆ. ಈ ಬಗ್ಗೆ ಸಿದ್ದರಾಮಯ್ಯನೇ ಉತ್ತರಿಸಬೇಕು. ಇದಕ್ಕೂ ನಮಗೂ ಯಾವುದೇ ಸಂಬಂಧವಿಲ್ಲ. ನಮ್ಮ ಮನೆ ಬಾಗಿಲಿಗೆ ಯಾರೂ ಬಂದಿಲ್ಲ. ನಾವು ಹೋಗಿಲ್ಲ ಎಂದು ಆರ್.ಅಶೋಕ್ ಸ್ಪಷ್ಟನೆ ನೀಡಿದರು.

Key words: BJP  support –independent –legislators-R.ashok