ಕರ್ನಾಟಕಕ್ಕೆ ಕೋವಿಡ್ ಲಸಿಕೆ ಪೂರೈಕೆ: 2 ಕಂಪೆನಿಗಳ ಬಿಡ್ ತಿರಸ್ಕಾರ

ಬೆಂಗಳೂರು, ಮೇ 30,2021 (www.justkannada.in): ಸರ್ಕಾರ ಜಾಗತಿಕ ಟೆಂಡರ್ ಮೂಲಕ ಲಸಿಕೆ ಪೂರೈಕೆಗೆ ಆಹ್ವಾನ ನೀಡಿತ್ತು. ಎರಡು ಕಂಪನಿಗಳು ಟೆಂಡರ್ ಸಲ್ಲಿಕೆ ಮಾಡಿದ್ದವು. ಇವುಗಳನ್ನು ತಿರಸ್ಕರಿಸಲಾಗಿದೆ.

ಎರಡು ಕೋಟಿ ಡೋಸ್ ಕೋವಿಡ್ ಲಸಿಕೆ ಖರೀದಿಗೆ ರಾಜ್ಯ ಸರ್ಕಾರ ಆಹ್ವಾನಿಸಿದ್ದ ಜಾಗತಿಕ ಟೆಂಡರ್‌ನಲ್ಲಿ ಬಂದಿದ್ದ ಎರಡೂ ಪ್ರಸ್ತಾವವನ್ನು ತಿರಸ್ಕರಿಸಲಾಗಿದೆ ಎಂದು ಡಿಸಿಎಂ ಅಶ್ವಥ್ ನಾರಾಯಣ ಹೇಳಿದ್ದಾರೆ.

ರಾಜ್ಯಕ್ಕೆ ಸ್ಪುಟ್ನಿಕ್ ಲಸಿಕೆ ಪೂರೈಕೆ ಮಾಡಲು ಮುಂಬೈ ಮತ್ತು ದೆಹಲಿಯ ಕಂಪನಿಗಳು ಬಿಡ್ ಸಲ್ಲಿಕೆ ಮಾಡಿದ್ದವು. ಆದರೆ ಕಂಪನಿಗಳು ನಮೂದಿಸಿದ ದರ ಸೇರಿದಂತೆ ಇತರ ಅಂಶಗಳು ಕಾರ್ಯಸಾಧು ಅಲ್ಲ. ಹೀಗಾಗಿ ಟೆಂಡರ್ ತಿರಸ್ಕರಿಸಲಾಗಿದೆ. ಹೊಸ ಟೆಂಡರ್ ಸಲ್ಲಿಕೆ ಅವಧಿಯನ್ನು ವಿಸ್ತರಣೆ ಮಾಡಲಾಗಿದೆ ಎಂದು ಡಿಸಿಎಂ ಮಾಹಿತಿ ನೀಡಿದ್ದಾರೆ.