ಕೊರೊನಾದಿಂದ ಜನ ಸಾಮಾನ್ಯರ ಜೀವ ರಕ್ಷಣೆ: ಒಡಿಶಾ ಸಿಎಂಗೆ ವಿಶ್ವಸಂಸ್ಥೆ ಮೆಚ್ಚುಗೆ

ಬೆಂಗಳೂರು, ಮೇ 30,2021 (www.justkannada.in): ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರನ್ನು ವಿಶ್ವಸಂಸ್ಥೆ ಮುಕ್ತಕಂಠದಿಂದ ಶ್ಲಾಘಿಸಿದೆ.

ನೈಸರ್ಗಿಕ ವಿಕೋಪಗಳ ಸಂದರ್ಭದಲ್ಲಿ ವಿಪತ್ತು ನಿರ್ವಹಣೆ ಪ್ರಾಧಿಕಾರಕ್ಕೆ ಸಾಕಷ್ಟು ಸಂಪನ್ಮೂಲಗಳನ್ನು ಒದಗಿಸುವ ಮೂಲಕ ಜನರ ಜೀವಗಳನ್ನು ರಕ್ಷಿಸಿದ ಕಾರಣಕ್ಕೆ ವಿಶ್ವಸಂಸ್ಥೆ ಮೆಚ್ಚುಗೆಗೆ ನವೀನ್ ಪಟ್ನಾಯಕ್ ಪಾತ್ರರಾಗಿದ್ದಾರೆ.

ಆಕರ್ಷಕ ಮತ್ತು ಸಂಪನ್ಮೂಲ ಭರಿತ ವಿಕೋಪ ನಿರ್ವಹಣೆ ಪ್ರಾಧಿಕಾರವನ್ನು ಕಟ್ಟುವ ನಿಟ್ಟಿನಲ್ಲಿ ಪಟ್ನಾಯಕ್ ಅವರು ಅಗತ್ಯ ರಾಜಕೀಯ ಬದ್ಧತೆಯನ್ನು ಪ್ರದರ್ಶಿಸಿದ್ದಾರೆ ಎಂದು ವಿಶ್ವಸಂಸ್ಥೆಯ ವಿಕೋಪ ಅಪಾಯ ಸಾಧ್ಯತೆ ಇಳಿಕೆ ಕಚೇರಿ (ಯುಎನ್‌ಡಿಆರ್‌ಆರ್) ಮುಖ್ಯಸ್ಥ ಮಮಿ ಮಿಝುತ್ರೋಯ್ ಶ್ಲಾಘಿಸಿದ್ದಾರೆ.