ಸ್ಥಾಯಿ ಸಮಿತಿ ಚುನಾವಣೆ ಮುಂದೂಡಿಕೆ ಹಿನ್ನೆಲೆ: ಪಾಲಿಕೆ ಕಚೇರಿ ಕೋಣೆಗಳಿಗೆ ಬೀಗ ಜಡಿದು ‘ಕೈ’  ಸದಸ್ಯರ ಪ್ರತಿಭಟನೆ.

ಮೈಸೂರು,ಫೆಬ್ರವರಿ,2,2023(www.justkannada.in):  ಮೈಸೂರು ಮಹಾನಗರ ಪಾಲಿಕೆ ಸ್ಥಾಯಿ ಸಮಿತಿ  ಅಧ್ಯಕ್ಷರ ಚುನಾವಣೆ ದಿಢೀರ್ ಮುಂದೂಡಿಕೆಯಾದ ಹಿನ್ನೆಲೆ ಕಾಂಗ್ರೆಸ್ ಸದಸ್ಯರು ಪಾಲಿಕೆ ಕಚೇರಿಗಳಿಗೆ ಬೀಗ ಜಡಿದು ಪ್ರತಿಭಟನೆ ನಡೆಸಿದರು.

ಚುನಾವಣೆ ದಿಢೀರ್ ಮುಂದೂಡಿಕೆ ಹಿನ್ನೆಲೆ  ಮೇಯರ್ ಶಿವಕುಮಾರ್ ವಿರುದ್ದ ಕಾಂಗ್ರೆಸ್ ಸದಸ್ಯರು ಆಕ್ರೋಶ ವ್ಯಕ್ತಪಡಿಸಿ ಹಳೇ ಕೌನ್ಸಿಲ್ ಸಭಾಂಗಣಕ್ಕೆ  ಬೀಗ ಹಾಕಿ ಪ್ರತಿಭಟಿಸಿದರು. ಮೇಯರ್ ಕಚೇರಿಗೂ ಬೀಗ ಹಾಕಲು ಕಾಂಗ್ರೆಸ್ ಸದಸ್ಯರು ಯತ್ನಿಸಿದರು. ಈ ಹಿನ್ನೆಲೆಯಲ್ಲಿ ಸ್ಥಳದಲ್ಲಿ ಕೆಲ ಕಾಲ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು.

ಕೂಡಲೇ ಸ್ಥಳಕ್ಕೆ ಪೋಲಿಸರ ಆಗಮಿಸಿದ್ದು ಈ ವೇಳೆ  ನಗರ ಪಾಲಿಕೆ ಸದಸ್ಯರು ಹಾಗೂ ಪೊಲೀಸರ ನಡುವೆ ಮಾತಿನ ಚಕಮಕಿ ನಡೆದು ತಳ್ಳಾಟ ನೂಕಾಟ ಉಂಟಾಯಿತು.

Key words: mysore -city-corporation- Standing- Committee- Election –Postponement- Protest -congress