Sunday, September 13, 2026

BDA Apartments

ಸೂಪರ್’ಸ್ಟಾರ್ ರಜನಿಕಾಂತ್’ಗೆ ವಿಶ್ವಕಪ್ ಕ್ರಿಕೆಟ್ ‘ಗೋಲ್ಡನ್ ಟಿಕೆಟ್’ ನೀ...
Home Cinema ಸೂಪರ್’ಸ್ಟಾರ್ ರಜನಿಕಾಂತ್’ಗೆ ವಿಶ್ವಕಪ್ ಕ್ರಿಕೆಟ್ ‘ಗೋಲ್ಡನ್ ಟಿಕೆಟ್’ ನೀಡಿದ ಬಿಸಿಸಿಐ

ಸೂಪರ್’ಸ್ಟಾರ್ ರಜನಿಕಾಂತ್’ಗೆ ವಿಶ್ವಕಪ್ ಕ್ರಿಕೆಟ್ ‘ಗೋಲ್ಡನ್ ಟಿಕೆಟ್’ ನೀಡಿದ ಬಿಸಿಸಿಐ

ಬೆಂಗಳೂರು, ಸೆಪ್ಟೆಂಬರ್ 20, 2023 (www.justkannada.in): ವಿಶ್ವಕಪ್‌ ಕ್ರಿಕೆಟ್ ಪಂದ್ಯಗಳನ್ನು ವೀಕ್ಷಿಸಲು ಸೂಪರ್‌ಸ್ಟಾರ್ ರಜನಿಕಾಂತ್ ಅವರಿಗೆ ‘ಗೋಲ್ಡನ್ ಟಿಕೆಟ್’ ನೀಡಲಾಗಿದೆ.

ಹೌದು. ಮುಂದಿನ ತಿಂಗಳು 5 ರಿಂದ ಭಾರತದಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್‌ನ ಪಂದ್ಯಗಳ ಗೋಲ್ಡನ್ ಟಿಕೆಟ್ ಗಳನ್ನು ರಜಿನಿಕಾಂತ್ ಅವರಿಗೆ ನೀಡಲಾಗಿದೆ.

ಚೆನ್ನೈನಲ್ಲಿರುವ ರಜನಿ ಮನೆಗೆ ಭೇಟಿ ನೀಡಿದ . ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಅವರು ಈ ಗೋಲ್ಡನ್ ಟಿಕೆಟ್ ಹಸ್ತಾಂತರಿಸಿದ್ದಾರೆ.

ಈಗಾಗಲೇ ಬಾಲಿವುಡ್ ಬಿಗ್ ಬಿ ಅಮಿತಾಬ್ ಬಚ್ಚನ್, ಟೀಂ ಇಂಡಿಯಾ ಕ್ರಿಕೆಟ್ ದಿಗ್ಗಜ ಹಾಗೂ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರಿಗೆ ಜೈ ಶಾ ಈ ಗೋಲ್ಡನ್ ಟಿಕೆಟ್‌ಗಳನ್ನು ನೀಡಿದ್ದಾರೆ.

ಈ ಗೋಲ್ಡನ್ ಟಿಕೆಟ್ ಪಡೆದ ಸೆಲೆಬ್ರಿಟಿಗಳು ವಿಐಪಿ ಲಾಂಜ್‌ನಲ್ಲಿ ಸಂಪೂರ್ಣ ಉಚಿತವಾಗಿ ಕುಳಿತು ವಿಶ್ವಕಪ್ ಪಂದ್ಯಗಳನ್ನು ವೀಕ್ಷಿಸಬಹುದು. ರಜನಿಕಾಂತ್‌ಗೆ ಗೋಲ್ಡನ್ ಟಿಕೆಟ್ ನೀಡಿದ ನಂತರ, ಬಿಸಿಸಿಐ ಮತ್ತು ಜಯ್ ಶಾ ತಮ್ಮ ಟ್ವಿಟರ್ ಖಾತೆಯಲ್ಲಿ ತಮ್ಮ ಅಭಿಮಾನಿಗಳೊಂದಿಗೆ ಮಾಹಿತಿ ಹಂಚಿಕೊಂಡಿದ್ದಾರೆ.