Sunday, August 9, 2026

BDA Apartments

Home Election News and Analysis ಇಂದು ಮಂಡ್ಯ ಜನತೆಯ ಸ್ವಾಭಿಮಾನದ ಗೆಲುವು- ಹರ್ಷ ವ್ಯಕ್ತಪಡಿಸಿದ ಸುಮಲತಾ ಅಂಬರೀಶ್….

ಇಂದು ಮಂಡ್ಯ ಜನತೆಯ ಸ್ವಾಭಿಮಾನದ ಗೆಲುವು- ಹರ್ಷ ವ್ಯಕ್ತಪಡಿಸಿದ ಸುಮಲತಾ ಅಂಬರೀಶ್….

ಮಂಡ್ಯ,ಮೇ,23,2019(www.justkannada.in): ತೀವ್ರ ಕುತೂಹಲ ಕೆರಳಿಸಿದ್ದ  ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ವಿರುದ್ದ ಗೆಲುವಿನ ಕಹಳೆ ಊದಿರುವ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ತಮ್ಮ ಗೆಲುವಿನ ಬಗ್ಗೆ ಹರ್ಷ ವ್ಯಕ್ತಪಡಿಸಿದ್ದಾರೆ.

ಮಾಧ್ಯಮಗಳ ಜತೆ ಮಾತನಾಡಿದ ಸುಮಲತಾ ಅಂಬರೀಶ್, ಇದು ನನ್ನ ಗೆಲುವಲ್ಲ, ಅಂಬರೀಷ್ ಗೆಲುವು, ಮಂಡ್ಯ ಜನರ ಸ್ವಾಭಿಮಾನದ ಗೆಲುವು.ನಾನು ತುಂಬಾ ದೊಡ್ಡ ಸಾಹಸ ಮಾಡಿದ್ದೇನೆ. ನನ್ನ ಗೆಲುವಿಗೆ  ಇಡಿ ರಾಜ್ಯದ ಜನ ಹಾರೈಸಿದ್ದಾರೆ. ಒಬ್ಬೊಬ್ಬರಿಗೂ ನಾನು ಧನ್ಯವಾದ ಹೇಳಲು ಇಷ್ಟಪಡುತ್ತೇನೆ ಎಂದರು.

ಮಂಡ್ಯದ ಜನತೆ ಪ್ರಜಾಪ್ರಭುತ್ವದ ಕಿರೀಟವನ್ನು ಎತ್ತಿ ಹಿಡಿದಿದ್ದಾರೆ. ಹಣಬಲ ತೋಳ್ಬಲ ಎಲ್ಲವನ್ನೂ ಮೀರಿ ಆಮಿಷಗಳನ್ನು ಮೀರಿ ಪ್ರಜಾಪ್ರಭುತ್ವವನ್ನು ಗೆಲ್ಲಿಸಿದ್ದಾರೆ ಕೋಟಿ ಕೋಟಿ ಅನಂತ ಅನಂತ ಅಭಿನಂದನೆಗಳು. ನನ್ನ ಬೆಂಬಲಕ್ಕೆ ನಿಂತ ಯಾರನ್ನೂ ಮರೆಯುವುದಿಲ್ಲ.  ನಾನು ಆಯ್ಕೆ ಮಾಡಿಕೊಂಡಿದ್ದ ಆಯ್ಕೆ ಒಳ್ಳೆಯದಾಗಿತ್ತು ಎಂದು ಸುಮಲತಾ ಅಂಬರೀಶ್ ನುಡಿದಿದ್ದಾರೆ.

Key words: Sumalatha Ambarish was happy about the win.

#election2019 #sumlathaambarish #happy #mandya