ಲೋಕಸಭೆ ಫಲಿತಾಂಶ ಅನಿರೀಕ್ಷಿತ: ಟ್ವಿಟ್ಟರ್ ನಲ್ಲಿ ಪ್ರಧಾನಿ ಮೋದಿಗೆ ಶುಭಾಶಯ ತಿಳಿಸಿದ ಸಿಎಂ ಹೆಚ್.ಡಿ ಕುಮಾರಸ್ವಾಮಿ…

ಬೆಂಗಳೂರು,ಮೇ,23,2019(www.justkannada.in): ಲೋಕಸಭೆ ಚುನಾವಣೆಯ ಫಲಿತಾಂಶ ಅನಿರೀಕ್ಷಿತವಾದದ್ದು. ಫಲಿತಾಂಶವನ್ನ ಗೌರವಿಸುತ್ತೇನೆ ಎಂದು ಸಿಎಂ ಹೆಚ್.ಡಿ ಕುಮಾರಸ್ವಾಮಿ ಟ್ವಿಟ್ಟರ್ ನಲ್ಲಿ ತಿಳಿಸಿದ್ದಾರೆ.

ಫಲಿತಾಂಶದ ಬಗ್ಗೆ ಟ್ವಿಟ್ಟರ್ ನಲ್ಲಿ ಪ್ರತಿಕ್ರಿಯಿಸಿರುವ ಸಿಎಂ ಹೆಚ್.ಡಿ ಕುಮಾರಸ್ವಾಮಿ, ಲೋಸಸಭೆ ಫಲಿತಾಂಶ ಅನಿರೀಕ್ಷಿತವಾದದ್ದು. ಫಲಿತಾಂಶವನ್ನ ಗೌರವಿಸುತ್ತೇನೆ. ಹಾಗೂ ಮತ್ತೊಮ್ಮ ಜನಾದೇಶ ಪಡೆದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ. ರಾಜ್ಯದಲ್ಲಿ ಗೆಲುವು ಸಾಧಿಸಿದ ಎಲ್ಲಾ ಅಭ್ಯರ್ಥಿಗಳಿಗೆ ನನ್ನ ಶುಭಾಶಯಗಳು ಎಂದು ಟ್ವಿಟ್ ಮಾಡಿದ್ದಾರೆ.

ಹಾಗೆಯೇ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಅಭ್ಯರ್ಥಿಗಳ ಸೋಲಿನ ಬಗ್ಗೆ ಎರಡು ಪಕ್ಷಗಳ ನಾಯಕರು ಚರ್ಚೆ ನಡೆಸುತ್ತೇವೆ. ರಾಜಕೀಯದಲ್ಲಿ ನಮ್ಮ ಪಕ್ಷವು ಸೋಲು ಗೆಲುವನ್ನ ಕಂಡಿದೆ.  ಸೋಲಿನಿಂದ ಪಕ್ಷದ ಕಾರ್ಯಕರ್ತರು ಎದೆಗುಂದಬಾರದು. ಮುಂದಿನ ದಿನಗಳಲ್ಲಿ ಪಕ್ಷವನ್ನ ಬಲಪಡಿಸಲು ಶ್ರಮಿಸೋಣ ಎಂದು ಪಕ್ಷದ ಕಾರ್ಯಕರ್ತರಿಗೆ ಕಿವಿಮಾತು ಹೇಳಿದ್ದಾರೆ.

Key words: Lok Sabha results are unexpected. CM HD Kumaraswamy congratulate to  PM modi

#Lokasabhaelection2019  #cmhdkumaraswamy  #wishes #pmnarendramodi