ಕನ್ನಡ ಬಿಗ್ ಬಾಸ್ ಸೀಸನ್-8 ಯಾವಾಗ ? ಮಾಹಿತಿ ಕೊಟ್ಟ ಕಿಚ್ಚ

ಬೆಂಗಳೂರು, ಜನವರಿ 23, 2021 (www.justkannada.in): ನಟ ಕಿಚ್ಚ ಸುದೀಪ್ ಬಿಗ್ ಬಾಸ್ ಸೀಸನ್ 8 ಸಂಬಂಧಪಟ್ಟ ಸುದ್ದಿಯೊಂದನ್ನು ಹಂಚಿಕೊಂಡಿದ್ದಾರೆ.

ಹೌದು. ಫೆಬ್ರವರಿಯಲ್ಲಿ ‘ಬಿಗ್ ಬಾಸ್‌’ ಕನ್ನಡ ಸೀಸನ್‌ 8 ಆರಂಭವಾಗಲಿದೆ. ಈ ವಿಷಯವನ್ನು ಸುದೀಪ್ ತಿಳಿಸಿದ್ದಾರೆ.

ಬಿಗ್ ಬಾಸ್ ಪ್ರೋಮೋ ಚಿತ್ರೀಕರಣದಲ್ಲಿ ಭಾಗಿಯಾಗಿರುವ ಫೋಟೋವನ್ನು ಸುದೀಪ್ ಹಂಚಿಕೊಂಡಿದ್ದಾರೆ.

ಬಿಗ್ ಬಾಸ್‌ ಸೀಸನ್ 8ರ ಪ್ರೋಮೋ ಶೂಟ್ ನಡೆಯುತ್ತಿದೆ..’ ಎಂದು ಟ್ವಿಟರ್‌ನಲ್ಲಿ ಬರೆದುಕೊಂಡಿದ್ದಾರೆ. ಇದನ್ನು ಕಂಡ ಬಿಗ್ ಬಾಸ್ ಅಭಿಮಾನಿಗಳು ಫುಲ್ ಖುಷಿಯಾಗಿದ್ದಾರೆ.