ಕಿಚ್ಚ ಸುದೀಪ್ ‘ಹುಚ್ಚ’ ರಿಲೀಸ್ ಆಗಿದ್ದ ದಿನ ಇಂದು !

ಬೆಂಗಳೂರು, ಜುಲೈ 06, 2019 (www.justkannada.in): ಜುಲೈ 6 ನಟ ಕಿಚ್ಚ ಸುದೀಪ್ ವಿಶೇಷ ದಿನ!

ಜುಲೈ 6, 2001 ರಂದು ಬಿಡುಗಡೆಯಾದ ಈ ಸಿನಿಮಾ ಮೂಲಕ ಸುದೀಪ್ ಲೈಫ್ ಬದಲಾಯಿತು. ಈ ದಿನದಿಂದ ಇಂಡಸ್ಟ್ರಿಯಲ್ಲಿ ಹೊಸ ಹೆಜ್ಜೆ ಇಟ್ಟರು. ಇಲ್ಲಿಂದ ಸುದೀಪ್ ಮತ್ತೆ ತಿರುಗಿ ನೋಡಲೇ ಇಲ್ಲ.

ಕಿಚ್ಚ ಸುದೀಪ್ ನಟನೆಯ ಸೂಪರ್ ಹಿಟ್ ಸಿನಿಮಾ ಹುಚ್ಚ ತೆರೆಕಂಡ ದಿನ ಜುಲೈ 6, 2001 ರಲ್ಲಿ ಹುಚ್ಚ ಚಿತ್ರ ಬಿಡುಗಡೆಯಾಗಿತ್ತು.

2019, ಜುಲೈ 6ಕ್ಕೆ ಹುಚ್ಚ ಸಿನಿಮಾ ಬಂದು 18 ವರ್ಷ ತುಂಬಿದೆ. ಹುಚ್ಚ ಸಿನಿಮಾದಲ್ಲಿ ಸುದೀಪ್ ಮಾಡಿದ ಕಿಚ್ಚ ಪಾತ್ರ ಇಂದಿಗೂ ಯಾರೂ ಮರೆಯಲ್ಲ.