ಕುರುಕ್ಷೇತ್ರ ‘ಸಾಹೋರೇ ಸಾಹೋ….’ ಸಾಂಗ್ ರೀಲಿಸ್ !

ಬೆಂಗಳೂರು, ಜುಲೈ 06, 2019 (www.justkannada.in): ಅಧಿಕೃತವಾಗಿ ಧ್ವನಿ ಸುರಳಿ ರಿಲೀಸ್ ಆಗುವುದಕ್ಕೂ ಮುಂಚೆಯೇ ಯೂಟ್ಯೂಬ್ ನಲ್ಲಿ ಕುರುಕ್ಷೇತ್ರ ಚಿತ್ರದ ಮೊದಲ ಹಾಡು ಅನಾವರಣಗೊಂಡಿದೆ.

‘ಸಾಹೋರೇ ಸಾಹೋ….’ ಹಾಡು ರಿಲೀಸ್ ಆಗಿದ್ದು ಸದ್ಯ ಯೂಟ್ಯೂಬ್ ನಲ್ಲಿ ಅಬ್ಬರ ಮಾಡುತ್ತಿದೆ. ಡಾ ವಿ.ನಾಗೇಂದ್ರ ಪ್ರಸಾದ್ ಸಾಹಿತ್ಯ ಹೊಂದಿರುವ ಈ ಹಾಡನ್ನ ವಿಜಯ ಪ್ರಕಾಶ್ ಹಾಡಿದ್ದಾರೆ.

ಹರಿಕೃಷ್ಣ ಅವರ ಸಂಗೀತ ಒಳಗೊಂಡಿದ್ದು, ಪೌರಾಣಿಕ ಚಿತ್ರಕ್ಕೆ ಅಗತ್ಯವಾದಂತೆ ಮೂಡಿ ಬಂದಿದೆ. ಅಂದ್ಹಾಗೆ, ಈ ಹಾಡು ದುರ್ಯೋಧನನ ವ್ಯಕ್ತಿತ್ವವನ್ನ ಬಣ್ಣಿಸುವ ಹಾಡಾಗಿದೆ.