ಜೆಡಿಎಸ್ ಸೇರುವ ಬಗ್ಗೆ ವದಂತಿ ಹಿನ್ನೆಲೆ; ಸ್ಪಷ್ಟನೆ ನೀಡಿದ ಬಿಜೆಪಿ ಶಾಸಕ…

ಕೊಪ್ಪಳ,ಜು,6,2019(www.justkannada.in):  ಜೆಡಿಎಸ್ ಸೇರುತ್ತಾರೆಂಬ ವದಂತಿ ಹಬ್ಬಿದ ಹಿನ್ನೆಲೆ ಈ ಬಗ್ಗೆ ಸ್ಪಷ್ಟನೆ ನೀಡಿರುವ ಕನಕಗಿರಿ ಬಿಜೆಪಿ ಶಾಸಕ ಬಸವರಾಜ ದಡೇಸುಗೂರು, ನಾನು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಲ್ಲ ಎಂದು ಹೇಳಿದ್ದಾರೆ.

ಈ ಕುರಿತು ಸ್ಪಷ್ಟನೆ ನೀಡಿರುವ ಶಾಸಕ ಬಸವರಾಜ ದಡೇಸುಗೂರು, ನಾನು ಯಾವುದೇ ಕಾರಣಕ್ಕೂ ರಾಜೀನಾಮೆ ನೀಡಲ್ಲ. ಈ ಹೊತ್ತಿನ ವರೆಗೂ ಬಿಜೆಪಿ ಪಕ್ಷದಲ್ಲಿ ಇದ್ದೇನೆ. ಮುಂದೆ ಏನಾಗುತ್ತದೋ ಗೊತ್ತಿಲ್ಲ ಎಂದು ಹೇಳಿದ್ದಾರೆ.

ಬಸವರಾಜ ಡಡೇಸುಗೂರು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಜೆಡಿಎಸ್ ಸೇರುತ್ತಾರೆ ಎಂಬ ಸುದ್ದಿಯ ಹಿನ್ನೆಲೆಯಲ್ಲಿ, ಈ ಕುರಿತು ಪ್ರತಿಕ್ರಿಯಿಸಿ. ನನಗೆ ಯಾವುದೇ ಪಕ್ಷದಿಂದಲೂ ಆಫರ್ ಬಂದಿಲ್ಲ. ನಾನು ಇವತ್ತಿನ ವಿಚಾರ ಮಾತ್ರ ಹೇಳುತ್ತಿದ್ದೇನೆ. ಮುಂದೆ ಏನಾಗುತ್ತದೆ ಗೊತ್ತಿಲ್ಲ ಎಂದರು.

Key words: Back – joining –JDS-Clarified- BJP MLA