ದೇಶಕ್ಕೆ ಭದ್ರತೆಯ ಸುದರ್ಶನ ಚಕ್ರ: ಕೇಂದ್ರ ಗೃಹ ಸಚಿವ ಅಮಿತ್ ಶಾ

ಬೆಂಗಳೂರು, ಮೇ 21, 2023 (www.justkannada.in): ಮೋದಿ ನೇತೃತ್ವದ ಸರ್ಕಾರವು ಸಮುದ್ರ ಭದ್ರತೆಯ ನೀತಿಯನ್ನು ಅಳವಡಿಸಿಕೊಂಡಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.

ಭಾರತೀಯ ನೌಕಾಪಡೆ, ಭಾರತೀಯ ಕೋಸ್ಟ್ ಗಾರ್ಡ್, ಮೆರೈನ್ ಪೊಲೀಸ್, ಕಸ್ಟಮ್ಸ್ ಮತ್ತು ಮೀನುಗಾರರನ್ನು ಸಂಪೂರ್ಣ ಸುದರ್ಶನ ಚಕ್ರವನ್ನಾಗಿ ಮಾಡಲು ಸಮುದ್ರ ಭದ್ರತೆಯ ನೀತಿಯನ್ನು ಅಳವಡಿಸಿಕೊಂಡಿದೆ ಎಂದು ಅಮಿತ್ ಶಾ ತಿಳಿಸಿದ್ದಾರೆ.

470 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗಲಿರುವ ಗುಜರಾತ್‌ನ ದ್ವಾರಕಾದಲ್ಲಿ ರಾಷ್ಟ್ರೀಯ ಕರಾವಳಿ ಪೊಲೀಸ್ ಅಕಾಡೆಮಿಯ (ಎನ್‌ಎಸಿಪಿ) ಖಾಯಂ ಕ್ಯಾಂಪಸ್‌ಗೆ ಅಮಿತ್ ಶಾ ಶಂಕುಸ್ಥಾಪನೆ ನೆರವೇರಿಸಿದ್ದಾರೆ.

ಪ್ರಧಾನಿ ಮೋದಿ ನೇತೃತ್ವದ ಸರ್ಕಾರ ಕರಾವಳಿ ಸುರಕ್ಷತಾ ನೀತಿ ರೂಪಿಸಿದ ಬಳಿಕ ಶತ್ರುಗಳು ಇಂತಹ ಘಟನೆಗಳನ್ನು ನಡೆಸಲು ಮುಂದಾದರೆ ತಕ್ಕ ಉತ್ತರ ಇಲ್ಲಿಂದ ಸಿಗಲಿದೆ ಎಂದು ತಿಳಿಸಿದ್ದಾರೆ.