ಯಶ್ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ ಉಪೇಂದ್ರ

ಬೆಂಗಳೂರು, ಜೂನ್ 02, 2021 (www.justkannada.in): ರಾಕಿಂಗ್ ಸ್ಟಾರ್ ಯಶ್ ಗೆ ರಿಯಲ್ ಸ್ಟಾರ್ ಉಪೇಂದ್ರ ಮೆಚ್ಚುಗೆ ಜತೆಗೆ ಧನ್ಯವಾದ ಸಲ್ಲಿಸಿದ್ದಾರೆ.

ಕೊರೋನಾದಿಂದಾಗಿ ಸಂಕಷ್ಟದಲ್ಲಿರುವ ಸಿನಿಮಂದಿಗೆ ಆರ್ಥಿಕ ನೆರವು ನೀಡುವುದಾಗಿ ನಿನ್ನೆ ನಟ ಯಶ್ ಘೋಷಿಸಿದ್ದರು. ಈ ನಿರ್ಧಾರಕ್ಕೆ ಉಪ್ಪಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಸಂಕಷ್ಟದಲ್ಲಿರುವ ಕಲಾವಿದರು, ತಂತ್ರಜ್ಞರಿಗೆ ವೈಯಕ್ತಿಕವಾಗಿ ಯಶ್ ತಲಾ 5000 ರೂ.ಗಳನ್ನು ನೀಡುವುದಾಗಿ ತಿಳಿಸಿದ್ದರು. ಈ ಹಣವನ್ನು ನೇರವಾಗಿ ಎಲ್ಲರ ಖಾತೆಗೆ ಕಳುಹಿಸುವುದಾಗಿ ತಿಳಿಸಿದ್ದರು.

ಇದು ಉತ್ತಮ ನಿರ್ಧಾರ, ಧನ್ಯವಾದಗಳು ಯಶ್. ಇಂತಹ ಮತ್ತಷ್ಟು ಮಹತ್ಕಾರ್ಯ ತಮ್ಮಿಂದ ನಡೆಸಲು ಆ ಭಗವಂತ ತಮಗೆ ಶಕ್ತಿ ನೀಡಲಿ ಎಂದು ಉಪೇಂದ್ರ ಹಾರೈಸಿದ್ದಾರೆ.